ಹಕ್ಕಿ ಗೂಡು

 



ನೀಲಿ ಬಾನಿನಲ್ಲಿ ಹಾರುವ ಹಕ್ಕಿಯೇ

ರೆಕ್ಕೆಪುಕ್ಕ ಬಡಿದು ಹಾರುವ ಹಕ್ಕಿಯೇ

ಚುಯ ಚುಯ ಗುಟ್ಟಿ ಕೂಗುವ ಹಕ್ಕಿಯೇ

ಹೊಟ್ಟೆಗಾಗಿ ಕಿಟಗಳ ಹುಡುಕುವ ಹಕ್ಕಿಯೇ


ಮರದ ಮೇಲೆ ಗೂಡು ಕಟ್ಟಲು

ಹೊತ್ತು ತಂದೆ ನೀ ಕಡ್ಡಿ ಹುಲ್ಲು

ಎಣೆದೆ ನೀ ಸುಂದರ ಗೂಡು

ನಿನ್ನ ಮನೆಯ ಸುಂದರ ನೋಡು


ಗುಬ್ಬಚ್ಚಿ ಗೂಡನು ಮರದಿ ಜೋತು ಬಿಟ್ಟು 

ಗೂಡಿನಲಿ ಎರಡು ಮೊಟ್ಟೆ ಇಟ್ಟು

ಪ್ರೀತಿಯಿಂದ ಬಿಸಿ ಕಾವ ಕೊಟ್ಟು

ತಂದಿಟ್ಟೆ ಮರಿ ಹಕ್ಕಿಗೆ ಸ್ವಲ್ಪ ಹಿಟ್ಟು

ಹಾರುತ ಹೊಡಿದೆ ನೀ ಹಕ್ಕಿಗಳ ಬಿಟ್ಟು 


ಹಕ್ಕಿಗಳು ಕೂಗುತಾ ನಿನ್ನ ಕರೆದು

ಹಾರಲು ಬಯಸಿ ನೆಲಕೆ ಬಿದ್ದು

ಬಡಿದು ರೆಕ್ಕೆ ಹಾರಿ ಗೂಡು ತೊರೆದು

ಗುಬ್ಬಚ್ಚಿ ಗೂಡು ಜೋತಡೈತಿ ನೋಡು


*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20