ಚುಕ್ಕಿ ಚಂದ್ರಮ



ಭಾನಂಗಳದಿ ಹೊಳೆವ ಚಂದ್ರಮ

ನೋಡುತ ಇರುಳ ಕಳೆವೆ ಅನುಪಮ 

ನಕ್ಷತ್ರಗಳ ಗೂಡಿನಲ್ಲಿ ಬೆಳಗುವೆ

ಸುತ್ತುತ ಭೂಮಿಯನ್ನು ಅಲೆವೆ

ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ


ನೀಲಿ ಆಕಾಶದಿ ನಿನ್ನದೇ ತಾನೇ ಸಾಮ್ರಾಜ್ಯ

ಹುಣ್ಣಿಮೆ ಬೆಳಕ ಚೆಲ್ಲಿ ಚಲಿಸುತಾ ರಾಜ್ಯ

ಮೋಡದ ನಡುವೆ ಕತ್ತಲು ಬೆಳಕ ವ್ಯಾಜ್ಯ 

ಓಡುತ ರಾತ್ರಿಯಲಿ ನಿನ್ನೆ ನೀನು ಮರೆವೆ

ಕಾಣದೊಂದು ಕಾಡಿನಲ್ಲಿ ಅವಿತು ಕೂತು ಕರೆವೆ

ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ 


ಮುಸ್ಸಂಜೆಯ ಬಾನಿನಲ್ಲಿ ನಿನ್ನದೇ ಛಾಯೆ

ಒಲವು ಬೆಸೆವ ರಾತ್ರಿಯೇ ಆ ನಿನ್ನ ಮಾಯೆ

ಹಕ್ಕಿಗಳ ಸದ್ದಿನಲ್ಲಿ ತಾಂಗಳಿಲಿ ಚುಕ್ಕಿ ಚಂದ್ರಮ

ತಾರೆಗಳ ಬೀದಿಯಲ್ಲಿ ಏನೋ ಸಂಭ್ರಮ

ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ 


 ನಕ್ಷತ್ರಗಳ ತೋಟ ನಗುವ ನಿನ್ನ ನೋಟ 

ಬದುಕು ಸೆಳೆವ ಸುಂದರ ಮೈಮಾಟ 

ಇರುಳ ರಾತ್ರಿಯಲಿ ಬೆಳುಕು ಚೆಲ್ಲಿ ಕಾಟ 

ಕಣ್ಣ ಅಂಚಿನಲಿ ಕಾಣತಾ ನಲಿವ ಓಟ

ನೀನೆ ತಾನೇ ಇರುಳ ತೇರಾ ಚುಕ್ಕಿ ಚಂದ್ರಮ 


********ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ