ಭರವಸೆಯ ಸಂಖ್ಯೆ
ಬದುಕು ಭರವಸೆಯ ಆಸೆಗಳ ನೂರಂಕೆ
ಕೊಟ್ಟು ಪಡೆಯುವ ನೋವು ನಲಿವಿನ ಸಂಖ್ಯೆ
ಮರೆಯದ ಮಾತುಗಳು ನೆನಪುಗಳ ಕೊಂಕೆ
ಕಾಡುವುದು ಪ್ರೀತಿ ಪ್ರಣಯದ ವಯಸ್ಸು ಮಂಕೆ
ಸಾಗುವ ದಾರಿಯಲಿ ನದಿ ಹರಿದಂತೆ ಕಷ್ಟ ಸುಖ
ಎಡರು ತೂಡರುಗಳ ತುಳಿದು ಹರಿವ ಚಲಕೆ
ನಿಂತ ನೀರಾಗದೆ ಹರಿವ ಮನದ ಬಯಕೆ
ಹಳೆತನವ ತೊಳೆದು ಹೊಸತನದ ಅಲಿಂಗನಕೆ
ಸಾಗುತ ಮುಂದೆ ತಿರುಗಿ ನೋಡದೆ ಹಿಂದೆ
ಕಟ್ಟಿ ಹಿಟ್ಟು ಕೊಂಡ ನೆನಪುಗಳ ಭಯವೊಂದೇ
ಕಾಡದೆ ಹಿದ್ದರೆ ಸಾಕು ನನ್ನ ಕಹಿಯಂತೆ
ನಗುತಾ ಹೊರಡುವ ನಾವು ತಿಂದ ಸವಿಯಂತೆ
ಮನಕೆ ಬಡಿದು ಮತ್ತೆ ಸಾಗುವ ಕನಸ್ಸುಗಳು
ಕಾಣದೆ ದಾರಿಯಲಿ ನನಸಾಗದೆ ಹೋದ ಬಯಕೆಗಳು
ಜೀವನ ಹರಿವ ರಭಸಕೆ ಕೊಚ್ಚಿ ಹೋದ ಆಸೆಗಳು
ಎಲ್ಲೊ ಅವಿತು ದಡದಿ ಮೊಳೆತು ಮತ್ತೆ ಚಿಗುರಿದ ಕನಸುಗಳು
**********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment