ತಾಯಿ




ಹೆತ್ತವಳು, ಹೊತ್ತವಳು, ಸಾಕಿ ಸಲಹಿ,

ಹಾಲುಣಿಸಿ, ಹಸಿವ ನಿಗಿಸಿ

ಪೋಷಿಸಿದವಳು ತಾಯಿ ಅಲ್ಲವೆ 


ಅಂಬೇಗಾಲು ನಾನು ಇಡುವಾಗ,

ತೆವಳಿ ನಡೆವಾಗ, ಬೀಳದಂತೆ

 ಜೋಪಾನ ಮಾಡಿದವಳು ತಾಯಿ ಅಲ್ಲವೆ 


ಮಗುವಿನಲ್ಲಿ ಸುಸು ಮಾಡಿ ಬಟ್ಟೆಗಳು ಒದ್ದೆಯಾದಾಗ

ಒಂಚೂರು ಬೇಸರಿಸದೆ ನಮನ್ನು ಶುಭ್ರ

ಮಾಡಿದವಳು ನಮ್ಮ ತಾಯಿ ಅಲ್ಲವೆ 


ಅರ್ಧ ರಾತ್ರಿಯಲಿ ನಾನೆದ್ದು ಅಳುವಾಗ

ನಿದ್ದೆಗೆಟ್ಟು, ನೀ ದಣಿದರು ಜೋಗುಳ ಆಡಿದವಳು

ನಮ್ಮ ತಾಯಿ ಅಲ್ಲವೆ 


ನಾವು ಬೆಳೆದು ದೊಡ್ಡವರಾದರು

 ಮನೆಯ ಮರವನು ಪೋಶಿಸುವಂತೆ

ನಮ್ಮನ್ನು ಬೆಳಿಸಿದವಳು ತಾಯಿ ಅಲ್ಲವೆ 


ಕಷ್ಟದಲಿ ನಾವು ಬೆಂದು ಮನದಿ ನೊಂದು

ಹಣಕಾಗಿ ಕಂಗಲಾದಾಗ, ಬರಣಿಯಿಂದ

ದುಡ್ಡು ಕೊಟ್ಟವಳು ತಾಯಿ ಅಲ್ಲವೆ 


ಊಟ ಮಾಡದೆ ನಾವು ಇರುವಾಗ

ನಮ್ಮ ಹೊಟ್ಟೆಯ ಹಸಿವ

ಕಂಡು ಕೈತುತ್ತ ಕೊಟ್ಟವಳು ತಾಯಿ ಅಲ್ಲವೆ 


ನಾನು ಜೀವನದಿ ಸೋತು, ಆತಶಾನಾಗಿ

ಬೇಸರದಿ ಕೈ ಕಟ್ಟಿ ಕುಳಿತಾಗ ನನಗಾಗಿ

ಕಣ್ಣೀರು ಸುರಿಸಿದವಳು ತಾಯಿ ಅಲ್ಲವೇ


ನೋವು ನಲಿವುಗಳಲ್ಲು ನಮ್ಮಗೆ

 ಧೈರ್ಯ ಕೊಟ್ಟವಳು ಜೊತೆಗೆ

 ಇದ್ದವಳು ತಾಯಿ ಅಲ್ಲವೆ


ಎಲ್ಲಾ ನೋವು ದಾಟಿ, ಹೆತ್ತ ಮಕ್ಕಳು,

ನೀನೊಬ್ಬ ದಡ್ಡಿ, ಏನು ತಿಳಿಯದು ಎಂದು

ಜಗಳವಾಡುವಾಗ ಸಿಟ್ಟನ್ನು ಸಹಿಸಿ, ನಾನೇಕೆ ಹೆತ್ತೆ 

ಎಂದು ಕೊರಗದೆ, ಸಹನೆ , ಶಾಂತಿ, ವಿನಯದಿ

 ಕ್ಷಮಯದರಿತ್ರಿ ತಾಯಿ ಅಲ್ಲವೆ 


 ತಣ್ಣನೆಯ ಬಾಳಿನಲಿ ಬಿರುಗಾಳಿ

ಬಿಸಿದರು, ತಡೆದವಳು ನಮ್ಮ ಪ್ರತಿ

ಹೆಜ್ಜೆಯಲು ಉಸಿರಾಗಿ, ಬಲವಾಗಿ,

ಚಲವಾಗಿ ನಿಂತವಳು ನಮ್ಮ  ತಾಯಿ ಅಲ್ಲವೆ 


ತಾಯಂದಿರ ದಿನದ ಶುಭಾಶಯಗಳು


********ರಚನೆ********

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35