ಏಕಾಂತದ ಮೌನ




ಏಕಾಂತದಿ ಒಲವ  ಮೌನ

ನನ್ನೆದೆಯ ತಾಕಿರಲು ನಿನ್ನ ನಯನ

ಉಸಿರು ಉಸಿರು ಹೇಳಿದೆ ಗಾನ

ಮನದ ಪಿಸು ಮಾತಿನ ಕವನ


ಮನದ ಮೌನವು ಏಕೆ ಇಗೆ

ಒಲವು ಮುಂಜಾನೆ ಬೆಳಕ ಹಾಗೆ

ಕಿರಣ ಚೆಲುವ ಹೂವೊಂದು  ತಾಗಿ

ಹೂವು ಮನದಿ ಒಲವಲಿ ಬಾಗಿ

ನೋಟದಿ ನುಡಿದಿದೆ ಪ್ರೀತಿ ನಮನ


ಇರುಳ ಕತ್ತಲೆಗೆ ಚಂದ್ರನ ಹೊಳಪು

ನಕ್ಷತ್ರಗಳು ನಗುತಾ ಮಿಣುಕು

ನೋಡುತ ಹಾಗೆ ಮನವು ಮೌನ

ನುಡಿದಿದೆ ನನ್ನೆದೆಯ ಪ್ರೀತಿ ಗಾನ 


ಮನದಿ ಕನಸ್ಸುಗಳ ಸವಿನೆನಪು

ಕಾಡಿದೆ ಏಕೊ ಬಿಡದೆ ನೆರಳಂತೆ

ನೆರಳು ಮರೆಯಾಗೋ ಒಳಗೆ

ಮೂಡಿದೆ ಏಕಾಂತದಿ ಒಲವ ಮೌನ


ಹಸಿರು ವನದ ಕಾಡಿನಲ್ಲಿ

ಎಲೆಗಳ ಚಟ ಪಟ ಸದ್ದು ಕೇಳಿ

ತಂಗಾಳಿಯ ಸುಯ್ ಎನ್ನುವ ಗಾಳಿ

ಹಾಡಿದೆ ಮನದಿ ಏಕಾಂತದ ಮೌನದ ಹೋಳಿ


ಹುಲ್ಲು ಬಯಲ ಹಾಸಿನಲ್ಲಿ

ಹಸಿರೂದ್ದು ಹುಟ್ಟ ಭೂಮಿ ನೋಡಿ

ಹಸು ಎಮ್ಮೆ ಕರುಗಳು ತಿಂದು

ಕರುವು ಹಸುವನು ಅಂಬ ಎಂದು ಕೋಗಿದೆ

ಮನವು ಕಲಕೋ ಏಕಾಂತದ ಮೌನ 


**********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20