ಬಾಲ್ಯದ ಆಟ




ಬಾಲ್ಯದ ಆಟ ಬದುಕಿನ ತುಂಟಾಟ

ಪ್ರೀತಿಲಿ ಆಡಿದ ಮಕ್ಕಳ ಆಟ

ಕಲಿಸಿತು ನಮಗೆ ಗೆಲುವಿನ ಪಾಠ

ನಾವು ಆಡಿ ಕುಣಿದ ನಲಿವಿನ ಆಟ 


ಬದುಕು ನೆನಪಿನ ಬಣ್ಣ

ಬರೆದವನು ವಿಧಿಯಣ್ಣ

ನೋಡು ತೆರೆದುಪ್ರೀತಿ ಕಣ್ಣ

ನೀ ಹೋಗುವ ಕೊನೆ ಮಣ್ಣ


ಬಾಳು ಬುಗುರಿಯ ಆಟ

ಕಾಣದ ಕಣ್ಣಿನ ನೋಟ

ಕಲಿಯಬೇಕು ನಾವು ಪಾಠ

ಚಾಟಿಯಲಿ ತಿರುಗುವ ಆಟ


ಬದುಕು ಒಂದು ಕುಂಟೆ ಪಿಲ್ಲೆ

ಅಡುತ್ತಿರುವಳು ನನ್ನ ನಲ್ಲೆ

ಮನೆಯಿಂದ ಮನೆಗೆ ಹಾರಿ

ಅ ಅಮ್ಮಟೆ ಅಮ್ಮಾಟೆ ಸಾರಿ


ಜೀವನ ಎಂಬುದು ಗೋಲಿ

ನಾವು ಇಲ್ಲಿ ಸೃಷ್ಟಿಯ ಕೂಲಿ

ಆ ದೇವರೇ ನಮ್ಮ ಪ್ರೀತಿ ಮಾಲಿ

ಗೆದ್ದವನು ಗೆದ್ದಂತೆ ನಡೆಯಲಿ 


ಜೀವನಒಂದು ಚಿನ್ನಿ  ದಾಂಡು

ಆಡುವವನ ಆಟದಿ ದಾಂಡು

ಒಡೆದ ಒಡೆತಕೆ ಎಗುರಿತು ಚಿನ್ನಿ

ಇಡಿದವ ಕ್ಯಾಚು ನಮ್ಮ ಚೆನ್ನಿ


ಚಿಣ್ಣರ ಒಲವಿನ ಕೋಲಾಟ

ಕೊಲನು ಇಡಿದು ಕಲ್ಲಿಗೆ ತಟ್ಟಿ

ಇಡಿಯಲು ಬಂದವಾ ಮುಟ್ಟಿ

ಓಡಿದೆವು ನಾವು ಕಲ್ಲು ಕುಟ್ಟಿ


ಮರಳಿನ ಮೇಲೆ ಹೊಂಗೆಯ ನೆರಳು

ಮರದ ಮೇಲೆ ಕೋತಿಗಳು ಹನ್ನೆರಡು

ಮುಟ್ಟಲು ಬಂದ ಕೋತಿಯು ಜಿಗಿದು

ಮರದ ಕೊಂಬೆ ಕೊಂಬೆಗೆ ನೆಗೆದು

ಆಡಿದ ಆಟವೆ ನಮ್ಮ ಮರಕೊತಿ


ಆಡುತಾ ಬೆಳೆದೆವು ನಾವು ಟಿಕ್ಕಿ

ಬೆಂಕಿಪೋಟ್ಟನ ತಿಪ್ಪೆಲಿ ಎಕ್ಕಿ

ಟಿಕ್ಕಿ ಕಟ್ಟಿ ಕಲ್ಲಲಿ ಕುಟ್ಟಿ ಒಡೆದು

ಗೆದ್ದು ಬಿಗಿದೆವು ಪೆಟ್ಟಿಗೆಯಲಿ ಜಡಿದು 


ಹಾರಿತು ನಮ್ಮ ಬಣ್ಣದ ಗಾಳಿ ಪಟ

ಏರಿತು ತೇಲಿ ಮುಗಿಲ್ಲೆತ್ತರಕೆ

ಇಡಿದ ದಾರದಿ ಸುತ್ರದಾರನಾ ಆಟ

ದಾರವು ಹರಿದರೆ ಸಾವು ಗಾಳಿಪಟಕೆ


ಒಡೀಸೆದೆವು ನಾವು ಸೈಕಲ್ ಟೈರು

ಶಾಲೆಗೆ ಒಮ್ಮೊಮ್ಮೆ ನಾವು ಗೈರು

ಒಲದಲ್ಲಿ ಹಸಿರು ರಾಗಿ ಪೈರು

ನೆನಪಿಗೆ ಬಂತು ಹೋಡಿಸಿದ ಟೈರು 


ಬಾಳು ನೋವು ನಲಿವಿನ ಬಂಡಿ

ಸಾಗು ತಿಂದು ಸಿಹಿ ಕಹಿಯಾ ತಿಂಡಿ

ಕುರು ನೀನು ಮಡಚಿ ಮಂಡಿ

ಸಾಗುವುದು ನಮ್ಮ ಬದುಕ ಎತ್ತಿನ ಬಂಡಿ 

*********ರಚನೆ **********

ದಾ. ಚಂದ್ರಶೇಖರ. ಸಿ. ಹೆಚ್

Comments

  1. ಚೆನ್ನಾಗಿದೆ ಚಂದ್ರಶೇಖರ್. 👍

    ReplyDelete

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35