ಉಸಿರು ನನ್ನವಳು




ಮನದ ಒಳಗೆ

                  ನೂರೆಂಟು ಬಯಕೆ

ಕನಸ್ಸು ಹೊತ್ತಾ

                  ಪ್ರೀತಿಯ ಹರಕೆ

ನಿನ್ನಾಸ್ಸೇ ಬಿತ್ತಿದೆ

                   ಈ ಪ್ರೀತಿ ಮನಕೆ

ಬರುವೆಯಾ ಚೆಲುವೆ

                    ನನ್ನ ಹೃದಯಕೆ 



ನನ್ನವಳ ಸವಿ ಮಾತು

     ಕೇಳಿ ನಾ ಪ್ರೇಮಿಯಾದೆ

ಅವಳ ಸಡಗರವ

      ನೋಡಿ ನಾ ಪ್ರೇಕ್ಷಕನಾದೆ

ನೆಪವೊಂದು ಸಾಕು

       ಅವಳ ತುಂಟಾಟಕೆ

ಕುಣಿದಿದೆ ಹೃದಯ

       ನನ್ನವಳ ಕುಡಿನೋಟಕೆ



ಪ್ರೀತಿಯ ಬಣ್ಣವ ಅಂಚುವ

       ಕಾಮನಬಿಲ್ಲು ನನ್ನವಳು

ಮೋಡದಿ ಮರೆಯಲಿ

        ಸುರಿವ ಮಳೆಯಿವಳು

ತಂಗಾಳಿಯಲಿ ಬೀಸುವ

        ತಣ್ಣನೆ ಉಸಿರಿವಳು

ನನ್ನನೇ ಅವರಿಸಿರುವ

        ಮುದ್ದಾದ ಹಸಿರಿವಳು



ಉಸಿರಿಗೆ ಸೋತೆ

         ನಾ ಪ್ರೀತಿ ಅಲೆಯಲಿ

ನಗುತಾ ನಾ ಬಿದ್ದೆ

         ನನ್ನವಳ ಬಲೆಯಲಿ

ಮುದ್ದಾದ ಹುಡಿಗಿಗೆ

         ಏನೆಂದು ಹೆಸರಿಡಿಲಿ

ನಿನ್ನ ಹೆಸರೇ ನನ್ನ

         ಉಸಿರು ನಿನಗೆ ತಿಳಿದಿರಲಿ



************ರಚನೆ ********

  ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ