ಮಂಜು ತಬ್ಬಿದಂತೆ
ನನ್ನ ಒಲವ ಅರಗಿಣಿ ನೀನು
ಹೃದಯದ ರಾಣಿ ನೀನು
ಮನದ ಕಾಮನಬಿಲ್ಲು ನೀನು
ಕನಸ ಕಾರ್ಮೋಡವೆ ನೀನು
ಮೋಡದಿ ಬೀಳುವ ಮಂಜಿನಲಿ
ನನ್ನ ನಲ್ಲೆಯ ಪ್ರೀತಿ ಒಲವಿನಲಿ
ನಡೆಯುವ ಜೋಡಿ ಹಕ್ಕಿಯಂತೆ
ಕುಣಿಯುವ ನವಿಲ ನಾಟ್ಯದಂತೆ
ಕಾಣದ ಹನಿಯೊಂದು ಮೈ ತಾಗಿ
ನನ್ನ ಮನದಿ ಭಾವನೆಗಳು ಕೂಗಿ
ಬದುಕ ಬಯಕೆಗಳು ಮಾಗಿ
ಸುರಿವ ಮಳೆ ಹನಿಯಾಯಿತೇ ಪ್ರೀತಿ
ಗೆಜ್ಜೆಯ ಸದ್ದು ಹೆಜ್ಜೆ ಇಟ್ಟಾಗ ಕೇಳಿ
ನಡೆವ ದಾರಿಯಲಿ ಒಲವ ತಂಗಾಳಿ
ಮಧುರ ಮನಸ್ಸಿನ ನಲಿವ ಹೋಳಿ
ಬಣ್ಣದಿ ಮಿಂದು ನನ್ನ ತಬ್ಬಿದಂತೆ ಚಳಿ
ಕೊರೆವ ಚಳಿಯಲಿ ಕಣ್ಣ ಹನಿ
ಪ್ರೀತಿ ಮುತ್ತಿನ ಮಂಜ ಹನಿ
ನನ್ನೆದೆಗೆ ತಬ್ಬಿ ಬಾಚಿ ಅಪ್ಪಿದಂತೆ
ನನ್ನ ಉಸಿರು ಹೆಸರ ಕೂಗಿದಂತೆ
*********ರಚನೆ**********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment