ಕಹಿಯಾ ಚೂರಿ

 



ಬದುಕು ಮುಗಿಸಿದ ಕಥೆ ನೂರು

ನೋವಿನ ವ್ಯಥೆ ಕೇಳುವರು ಯಾರು

ಮನದಿ ಒಮ್ಮೆ ನಗುವ ಆಸೆ ನನಗೆ

ಕಣ್ಣೀರು ಕುದಿಯುತಿದೆ ಕುಳಿತು ಕಣ್ಣ ರೆಪ್ಪೆ ಒಳಗೆ


ಒಮ್ಮೊಮ್ಮೆ ಕನಸು ನನಸ ಆದ  ಹಾಗೆ

ಮನವು ನೋವಿಂದ ಹಗುರಾದ ಆಗೇ

ಹೇಳಲು ಏಕೊ ಮಾತು ಬಾರದು

ನೋವಲಿ ಬೆಂದ ಕಹಿಯಾ ಚೂರಿದು


ಮುಂದೆ ಸಾಗುತ  ಬದುಕ ಪಯಣ ಸವಿದು

ಜೋಡಿ ಎತ್ತಿನಂಗೆ ನೋಗವ ಕಟ್ಟಿ ಎಳೆದು

ಮಧುರ ಕ್ಷಣಗಳು ನನ್ನಯ ಮನವ ಕಲಕಿತು

ಹಾಗೆ ಹೃದಯವು ಸವಿ ಹಾಡು ಹೇಳಿತು 


ನಡೆವ ದಾರಿಯಲಿ ನೋವುಗಳು ಎಷ್ಟು

ಬಿಡದ ಮನದ ಆಸೆ ಹುಚ್ಚುಗಳು ಅಷ್ಟು

ಬಿಟ್ಟುಬಿಡಲೇ ನನ್ನ ಕನಸುಗಳು ಇಷ್ಟು

ನನ್ನ ಮನದಿ ಕೊಳೆತ ಆಸೆಗಳು ಬಹಳಷ್ಟು


ಮೂಡದಿರಲಿ ನಗುವ ಬಾಳಲಿ ಬೇಸರ

ಕಾಯುತಿರುವೆ ನಾನು ಮೂಡಲು ನೇಸರ

ಯಾಕೋ ಏನೋ ನನ್ನ ಬಿಡದ ಅವಸರ

ತಾಳದಲ್ಲಿ ಬೇರೆತಂತೆ ಮಧುರ ಗಾನ ಸ್ವರ



*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ