ಒಲವ ಸಿಹಿ ಮುತ್ತು
ಒಲವ ಸಿಹಿಮುತ್ತು ಜೇನಾಯಿತೇ
ನಿನ್ನ ಮನವೆಕೋ ನನ್ನ ಕರೆಯಿತೇ
ಮನದ ಮೌನ ರಾಗಾ ಹಾಡಾಯಿತೇ
ಕೂಗಿ ಕರೆದ ಧ್ವನಿಯು ಸ್ವರವಾಯಿತೇ
ಎಷ್ಟು ಸಾರಿ ನೋಡಿದರು ಅಳಿಸದ ಛಾಯೆ
ಅವಳ ನೆನಪು ನನ್ನ ಕಾಡೋ ಮಾಯೆ
ಬಣ್ಣಗಳ ಕುಂಚದಲ್ಲಿ ಅರಳಿದ ಅರಗಿಣಿ
ಬಾಳ ಪುಟದಲ್ಲಿ ಮುದ್ದಿನ ಗಣಿ
ಮಾತು ಮಾತಿಗೆ ಕನಸ್ಸಯ್ತುಮೌನ
ಮೌನದ ಮನಸ್ಸು ನನ್ನೆದೆಯ ಪ್ರಾಣ
ಹೃದಯದಲ್ಲಿ ಅರಳಿದ ನಗುವ ಪ್ರೀತಿ ಕವಿತೆ
ಬಾಡದಿರಲಿ ಮಲ್ಲಿಗೆ ಕನಸ್ಸು ಮರೆತು ವನಿತೆ
ಬದುಕು ಬಯಸಿದ ಒಲವು ಎಷ್ಟು ಸುಂದರ
ನೋಟದಿ ಸೆರೆಯಾದ ಅನುಭವ ಮಧುರ
ಕೈಗೆ ಕೈ ತಾಗಿ ಮನಸ್ಸು ಮಾತು ಚೆಂದ
ನಿನ್ನ ನೆನಪ ಸವಿಯೇ ಪ್ರೀತಿ ಅಂದ
ಎ ಹುಡುಗಿ ಹೇಳಬಾರದೇ ಮಾತು
ನನ್ನದೇಯ ಗೂಡಿನಲಿ ನೀ ಅವಿತು ಕುಳಿತು
ಬಡಿವ ಹೃದಯದಿ ಸದ್ದು ನಿನದೆ
ಹರಿವ ರಕ್ತದಲ್ಲಿ ಒಲವ ದಾರಿ ನನದೆ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment