ಆರದಿರಲಿ ದೀವಿಗೆ
ಮನೆಗೆ ಊರ ದೇವರು
ದೀಪವನ್ನು ಹಚ್ಚಿಹರು
ಕಷ್ಟಗಳು ಉರಿದು ಉರಿದು
ಸುಖದ ಬೆಳುಕು ಚೆಲ್ಲಲ್ಲಿ
ಆರದಿರಲಿ ಮನೆಯ ದೀವಿಗೆ
ಮನಸ್ಸಿನಲ್ಲಿ ಅಶಾಂತಿ ತೊಲಗಿ
ನೆಮ್ಮದಿಯ ಬದುಕು ಬೆಳಗಿ
ಬಾಳು ಸುಖದಿ ಕುಣಿಯಲಿ
ಸಂಸಾರ ಸಂತಸದಿ ತೆಲಲಿ
ಮನದ ಶಾಂತಿ ದೀವಿಗೆ ಆರದಿರಲಿ
ನನ್ನಾಸ್ಸೇ ಒಲವಿನ ಹೂವೆ
ಬಳಿ ಬಂದು ಲವ್ ಯು ಅನುವೆ
ನಮ್ಮಿಬ್ಬರ ಪ್ರೀತಿ ಪಯಣ
ಶುರುವಾಯ್ತು ಹಾಗೆ ತನನ
ಆರದಿರಲಿ ಒಲವ ದೀವಿಗೆ
ಮನೆಯಲ್ಲಿ ಒಂದು ಸಾವು
ಮನೆಮಂದಿಗೆ ಬರಿ ನೋವು
ದೇಹ ಸಮಾಧಿ ಮಣ್ಣು ಸೇರಲು
ಹಾರುತ್ತಿರುವ ಆತ್ಮಕೆ ಶಾಂತಿ ಸಿಗಲಿ
ಮನೆ ನೆಮ್ಮದಿಯ ದೀವಿಗೆ ಆರದಿರಲಿ
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment