ಒಂಟಿ ನಾನು

 



ಈ ಒಂಟಿ ಬಾಳಿನಲಿ ಬೆಳದಿಂಗಳು ನಾನು

ಮೋಡಸುರಿದ ತುಂತುರು ಮಳೆ ಹನಿ ನೀನು

ಹನಿ ನೀರು ಮೈ ಸೋಕಿದ ಮಧುರ ನೀನು

ನಿನಗಾಗಿ ಕಾದು ಕುಳಿತ ಪ್ರೇಮಿ ನಾನು


ತಂಗಾಳಿಯ ಗಾಳಿಗೆ ಅಲೆಗಳು ಎದ್ದು

ಅಲೆಗಳ ರಬಸಕೆ ನಾ ಮುಳುಗಿ ಬಿದ್ದು

ದಡದಿ ಕಾಯುವ ನಿನ್ನ ಸೇರಲೆ

ನಿನ್ನ ಮನದಲಿ ನಾನು ಜಾರಲೆ


ತಿರುಗುತ್ತಿರುವ ಭೂಮಿಯಲಿ ಪಯಣ ನಮದು

ಒಮ್ಮೆ ಸೇರಿ ಕನಸ್ಸು ಹೇರುವ ಬಯಕೆ ನನ್ನದು

ಹರಿವ ನದಿಯ ನೀರಿನಂತೆ ಮನಸು ಶುಭ್ರ

ಕಲ್ಲ ಮೇಲೆ ಜಾರಿದಂಗೆ ಮನಸ್ಸು ಛಿದ್ರ 


ಪ್ರೀತಿ ಮನಕೆ ಸೇರುವಸೆ ಕಡಲ ತೀರ

ಹೊತ್ತು ಸಾಗುತಿಹಾ ನೆನಪು ಅಲೆಗೆ ಬಾರ

ಕನಸು ಮುರಿದು ಬಡಿದಂತೆ ದಡಕೆ

ಮತ್ತೆ ಮತ್ತೆ ನೆನಪಾಗೋ ಪ್ರೀತಿ ಬಯಕೆ


ಒಂಟಿಯಾಗಿ ಕಾಯುತಿಹೆ ನಿನಗಾಗಿ

ಅಲೆಗಳ ದಡಕೆ ಚುಂಬಿಸುವ ರೀತಿ ನನಗಾಗಿ

ಇಂದೆ ಇಂದೆ ದೂರ ಸರಿದು ಏಕೊ ಮನಸು ಬರಿದು

ಮರಳಿ ಮರಳಿ ನನ್ನ ಅಲೆಗಳ ತೀರಕೆ ಕರೆದು


************ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35