ವಚನಗಳು 17
ಗುರುವಿಗೆ ಗುಲಾಮನಾಗು ಮನಸ್ಸು ಆಳುವ ದೊರೆಯಾಗು ಲಿಂಗವ ಪೂಜಿ ಶಿವನಿಗೆ ಶರಣಾಗೂ ಕಾಯಕವೆಂಬ ಕೈಲಾಸದಿ ಬಸವಣ್ಣನ ಪ್ರೀತಿ ಪಾತ್ರನಾಗು ನುಡಿದಂತೆ ನಡೆಯಬೇಕು ಇಂಗು ತಿಂದ ಮಂಗನಂತೆ ಕುಣಿಯಬೇಡ ಮಾತಿಗೆ ಬೆಲೆ ಇಲ್ಲದಾಗ ಮೌನವೇ ಲೇಸು ಮನಸ್ಸಿಗೆ ತಪ್ಪಸ್ಸು ನೀಡುವ ಕಾಯಕವೇ ಲೇಸು ನಮ್ಮ ಬಸವಣ್ಣ ಇಚ್ಛೆಯಂತೆ ನಡೆದರೆ ಮನಸ್ಸು ಕುಣಿವುದು ಬುದ್ದಿ ಶುದ್ದಿ ಇಲ್ಲದಿದ್ದರೆ ಕೇಡು ಬರುವುದು ಲಿಂಗವ ಪೋಜಿದೋಡೆ ಶಿವ ಒಲಿವುದು ಕಾಯಕವು ಮಾಡಿದ ಕರ್ಮವ ತೆಗೆವುದು ನಮ್ಮ ಬಸವಣ್ಣ ******************ರಚನೆ **************** ಡಾ. ಚಂದ್ರಶೇಖರ. ಸಿ. ಹೆಚ್