ಹೇಗಿತ್ತು ನಿಮ್ಮ ಬಾಲ್ಯ




ನಾನಿನ್ನು ಮೂರನೇ ತರಗತಿ

ಯಾರು ಏತ್ತಬೇಕು ನನಗೆ ಆರತಿ

ನಮ್ಮಮ್ಮನೇ ಮನೆಯ ಗೌಡತಿ

ನಮ್ಮಪ್ಪನೇ ಮನೆಯ ಗೌಡ


ಅಜ್ಜಿ ಕೊಟ್ಟ ಬಳುವಳಿಯ ಹಸು

ನಮ್ಮನೆ ಹಿತ್ತಲಲ್ಲಿ ಮೇದಿತ್ತು ಹುಲ್ಲು

ಜಗಿದು ಜಗಿದು ಕಡಿಯುತ್ತ ಹಲ್ಲು

ಬಾಯಿಯಲ್ಲಿ ಸುರಿಸುತ್ತ ಜೊಲ್ಲು 

ಶಾಲೆಯ ಮೇಷ್ಟ್ರ ಧರಣಿ ಮಂಡಲ ಕವನ

ನನ್ನ ಮನಸ್ಸಲಿ ಹಸುವಿಗೆ ಭಕ್ತಿ ನಮನ


ಅಮ್ಮ ಹೇಳುವಳು ದಿನ ಕೆಲಸ

ಯಾರು ಮಾಡಬೇಕು ದಿವಸ

ಹಿತ್ತಲ ಮನೆಯ ಬಾಗಿಲು ತೆಗೆದು

ಹಸುವಿನ ಗಂಜಲ ತೊಟ್ಟಿಗೆ ಮಗೆದು

ಬರಿ  ಕೈಲಿ ಸಗಣಿಯ ಮುಟ್ಟಿ

ಮಾಡುವರಂತೆ ಸಗಣಿ ಬೆರಣಿ ತಟ್ಟಿ

ಸಗಣಿಯ ತಿಪ್ಪೆಗೆ ಎಸೆದು

ಬುಟ್ಟಿಯ ದೋಡ್ಡಿಲಿ ಹೊಗೆದು

ಶುಭ್ರವಾಗಿ ಕೈಕಾಲು ತೊಳೆದು


ಕರುವನ್ನು ಬಿಟ್ಟು ಹಾಲನು ಕುಡಿಯಲು

ತಂಬಿಗೆ ತಂದು ಕೆಚ್ಚೆಲಿಗೆ ನೀರನು ಸವರಿ

ಗುದ್ದುತಾ ಕರು ಹಾಲಿನ ಸವಿ ಕಂಡು

ಹೊಟ್ಟೆಯ ತುಂಬಾ ಹಾಲನು ಉಂಡು

ಕರುವನು ಕಟ್ಟಿ ಕೆಚ್ಚೆಲು ಮುಟ್ಟಿ ಹಾಲನು ಕರೆದು

ಅಮ್ಮ ಹೇಳಿದ ಪಾತ್ರೆಗೆ ಸುರಿದು

ಹಸುವಿನ ಪ್ರೀತಿ ಕರುವಿನ ಕಡೆಗೆ

ಕರುವು ಪ್ರೀತಿ ಹಸುವಿನ ಎಡೆಗೆ


ಹೇಗೆ ಬಣ್ಣಿಸಲಿ ಈ ಬಾಂದವ್ಯ

ಪ್ರೀತಿಯ ನಲ್ಮೆಯ ವಾತ್ಸಲ್ಯ

ಮನೆ ದೇವರ ಗುಡಿಗೆ ಪೂಜೆ

ಬೇಡಿದೆ ದೇವರ ಒಳ್ಳೇದು ಮಾಡು

ವಿದ್ಯಾ ಬುದ್ದಿ ನನಗೆ ನೀಡು

ಕಳೆಯಿತು ಈಗೆ ನಮ್ಮ ಬಾಲ್ಯ

ತಿನ್ನದೇ ಮುಸುರೆಗೆ ಎಸೆದ ಹಾಗಲಕಾಯಿ ಪಲ್ಯ

 ನಮ್ಮ ಪಯಣ ಶಾಲೆಯ ಕಡೆಗೆ

ದಿನವೂ ಶಾಲೆಗೆ ನಮ್ಮ ನಡಿಗೆ


***********ರಚನೆ *******

ಡಾ  ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20