ವಚನಗಳು -5



ನಂಬಿಸಿ ಒಟ್ಟಿಗೆ ಇದ್ದು ಕುತ್ತಿಗೆ ಕೊಯ್ಯಬೇಡ

ಒಂದೇ ತಟ್ಟೆಯಲ್ಲಿ ಉಂಡು  ಚೂರಿ ಹಾಕಬೇಡ

ಮೋಸದಿ ಬೆನ್ನಹಿಂದೆ ಯಾರನ್ನು ಬಯ್ಯಬೇಡ

ಬೀಡು,ಅವರ ಆತ್ಮಲಿಂಗವು ನಂಬಲಿ ಏನು ಮಾಡಿದೆ ಎಂದು


ಮನದ ಮರ್ಮವ ಬಲ್ಲವರು ಯಾರು

ಒಲವ ಇಂಗೀತವ ಅರಿತವರು ಯಾರು

ಜಗದಿ ಹುಟ್ಟು ಸಾವು ತಿಳಿದವರು ಯಾರು

ಕಾಯಕವ ಶ್ರದೆ ಇಂದ ಮಾಡು ಕೈಲಾಸ ಕಾಣುವುದು


ಸಜ್ಜನರಲ್ಲಿ ಸದ್ಗುಣವ ಬೇಡಿದೆ

ವಿದ್ಯಾವಂತರಲಿ ವಿದ್ಯೆ ಬೇಡಿದೆ

 ಊಟಕೆ ಇಟ್ಟಿಲ್ಲದೇ ಊಟವನ್ನು ಬೇಡಿದೆ

ಪೂಜರಿಯಲಿ ದೇವರ ಭಕ್ತಿಯ ಬೇಡಿದೆ

ಯಾರಲ್ಲೂ ಸಿಗಲಿಲ್ಲ ಬಸವಣ್ಣನು ನುಡಿದಂತೆ

 ಕಾಯಕವ ಮಾಡಿದೆ ಎಲ್ಲವೂ ಲಭಿಸಿತು ಎನ್ನ ಆತ್ಮಲಿಂಗ 


**********ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35