ನೂರಾಸೆ ತುಂಬಿದೆ
ತನನ, ತನನಾ, ತನನ, ತನನಾನನ
ಏ ಹುಡುಗಿ ಏಕೆ ನೂರಾಸೆ ತುಂಬಿದೆ
ಮನವೆಕೋ ಇಂದು,
ನಿನ್ನನ್ನೇ ಕೂಗಿದೆ
ಬದುಕಿನ ಪಯಣದಿ
ನೀ ದಾರಿ ತೋರಿದೆ
ಕನಸ್ಸುಗಳ ಮೂಟೆ
ಹೋತ್ತು ನಾ ನಿನ್ನಿಂದೆ ಸಾಗಿದೆ
ಏ ಹುಡುಗಿ ಏಕೆ ನೂರಾಸೆ ತುಂಬಿದೆ
ಏ ಹುಡುಗಿ ಏಕೆ ನೂರಾಸೆ ತುಂಬಿದೆ
ನಿನ ನೆನಪ ಸವಿ ದಾರಿಯಲಿ
ನಾ ಕಾಲು ಜಾರಿದೆ
ತಿಳಿಯದೆಯೇ ನನಗೆ
ನೀ ದೂರ ಹೋಡಿದೆ
ಮನಸ್ಸಿಂದು ನೊಂದು ಮೂಕವಾಗಿದೆ
ಏ ಹುಡುಗಿ ಏಕೆ ನನ್ನಿಂದ ದೂರದೇ
ನಿನ್ನಾಸ್ಸೇ ಹೊತ್ತು ನಾ ನಿನ್ನಿಂದೆ ಸಾಗಿದೆ
ನನ್ನ ಹೃದಯವಿಗಾ
ನಿನ್ನ ಹೆಸರ ಕೂಗಿದೆ
ಮನಸ್ಸು ಚುಚ್ಚಿ
ನೋವನ್ನು ತುಂಬಿ
ನೀನೇಕೆ ಹೊಡಿದೆ
ಏ ಹುಡುಗಿ ಹೇಳು ನಿನ್ನ ಹೇಗೆ ಮರೆಯಲಿ
ಏ ಹುಡುಗಿ ಹೇಳು ನಿನ ಹೇಗೆ ಮರೆಯಲಿ
ನನ್ನ ಈ ಪ್ರೀತಿಗೆ ಏನೆಂದು
ಹೆಸರಿಡಿಲಿ
ಮನದ ಮೌನದ ಹಾಡು
ನಾನೇಗೆ ಮುಚ್ಚಿಡಲಿ
ಏ ಹುಡುಗಿ ಒಮ್ಮೆ ಹೇಳಿ ಹೋಗು ಕಾರಣ
ಕಾಲವೇಕೋ ಕಾಡುತಿದೆ
ಕಹಿ ನೆನಪು ಹೊತ್ತು
ನೀನಿರದೆ ನೋಡುತಿದೆ
ಪ್ರೀತಿ ನಗುವ ಕಿತ್ತು
ಕನಸ್ಸುಗಳಲಿ ಬದುಕಿರುವೆ
ಮನದಾಸೆ ಸತ್ತು
ಏ ಹುಡುಗಿ ಏಕೆ ನೂರಾಸೆ ತುಂಬಿದೆ
ನಿನ್ನಾಸೆ ಹೊತ್ತು ನಾ ನಿನ್ನಿಂದೆ ಸಾಗಿದೆ
*********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್,
Comments
Post a Comment