ವಚನಗಳು -1
ಸಂಸ್ಕಾರವಿಲ್ಲದ ಬದುಕು
ನಡೆ ಇಲ್ಲದ ನುಡಿಯು
ಮೋಹ ತುಂಬಿದ ಮನವು
ಕಾಮ, ಕ್ರೋದ. ಲೋಭ. ಮದ, ಮತ್ಸರ್ಯ ಗೆಲ್ಲದ ಮನಸ್ಸು
ಜೇವದಲಿ ತುಂಬಿರಲು ದೇಹವು ಸಾವಿಗೆ ಸಮಾನ.
ನಾನು ನಾನು ಎಂದು ಬಡಿದಾಡ ಬೇಡವೋ ಮನುಜ
ನೀನಿಟ್ಟ ಹಣ. ಉಟ್ಟ ಬಟ್ಟೆ ನೀನು ಕೊಂಡೋಯ್ಯಲಿಲ್ಲ
ನೀನು ಮಾಡಿದ ಒಳಿತು ಹೇಳುವುದು ನಿನ್ನ ಹೆಸರು
ಕಾಗೆ ಮುಟ್ಟದ ನಿನ ದೇಹ ಸತ್ತಾಗ ಹುಳುವರು ಮಣ್ಣಿನಲ್ಲಿ
ಈಗ ಹೇಳು ನಿನದೆನು ಈ ತಿರುಗುವ ಭೂಮಿಯಲಿ.
ಉದಯಿಸುವ ಸೂರ್ಯನ ಬೆಳಕು ನಿನ್ನ ನೋಡಿ ನಿಲ್ಲಲಿಲ್ಲ
ಚಂದ್ರನ ದಿನ ರಾತ್ರಿ ಮಂದ ಬೆಳಕು ನಿನ್ನ ನೋಡಿ ನಿಲ್ಲಲಿಲ್ಲ
ಸುರಿವ ಮಳೆ ಆಕಾಶದಿ ಬಿಳು ವುದು ನಿನ್ನ ನೋಡಿ ನಿಲ್ಲಲಿಲ್ಲ
ಸಮುದ್ರದ ನೀರು ನಿನ್ನ ನೋಡಿ ಬತ್ತಲಿಲ್ಲ
ನೀನೇಕೆ ಜಂಬದಿ ಬಿಗುವೆ ಹೇ ಮನುಜ ನಾನಿಲ್ಲದೆ ಏನು ಇಲ್ಲ
ಕೊಟ್ಟು ಹೋಯಿತು ಎಂದು ಕೊರಗಬೇಡ
ಸುಟ್ಟು ಮೋಹದಿ ಮರುಗಬೇಡ
ಕೆಟ್ಟು ಬುದ್ದಿ ಇನಾನಾಗಿ ತಿರುಗಬೇಡ
ಬಿಟ್ಟು ಹೋಗುವ ಈ ಜಗದಲ್ಲಿ ಯಾವುದು ಶಾಶ್ವತವಲ್ಲ
ಕಾಯಕ ಯೋಗಿ ಬಸವಣ್ಣನಾ ತಿಳಿ
***********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Super sir
ReplyDelete