ನೋಟದಿ ಪ್ರೀತಿ
ನಿನ್ನ ತುಂಟ ನಗುವಿನ ಸೆಳೆತ
ಹೃದಯದಿ ನಿನದೆ ಮಿಡಿತ
ಕಣ್ಣಿನ ನೋಟದಿ ಪ್ರೀತಿ ರಂಗು
ನಿನ್ನಯ ಚೆಲುವು ತಂದಿದೆ ಗುಂಗು
ಬದುಕಲಿ ಬಂದೆ ನೀನೇ ಒಲವೇ
ನನ್ನಯ ಆಸೆ ಹೊತ್ತಾ ಮನವೇ
ನೀನು ಕೂಟ್ಟೆ ಸಾವಿರ ಕನಸು
ಮನದಿ ಬೆರೆತು ಮಾಡಿದೆ ನನಸು
ಹಿತವಾದ ಅಪ್ಪುಗೆ ನೀಡಿತು ಪ್ರೀತಿ
ಬಾಡಿದ ಮನಕೆ ನೀರೇರೆದ ರೀತಿ
ಮನಸಲಿ ಪ್ರೀತಿಗೆ ಜಾಗ ಕೊಟ್ಟೆ
ಮೊಗ್ಗು ಹೂವಾಗಿ ಅರಳಲು ಬಿಟ್ಟೆ
ಕೋಗಿಲೆಯಾಗಿ ವಸಂತಮಾಸದಿ ಬಂದೆ
ಚಿಗುರೆಲೆಯಾಗಿ ಹಣ್ಣು ಬಿಟ್ಟು ನಿಂದೆ
ಒಲವ ಸುಂದರ ಪ್ರಕೃತಿ ಹಸಿರು
ಎದೆ ಬಡಿತ ಕೂಗಿದೆ ನಿನ್ನ ಹೆಸರು
ಜೀವನ ಪಯಣದಿ ನೀನೇ ಸಾತಿ
ಬದುಕು ಸುಂದರ ಗೆಲುವಿನ ನೀತಿ
ಹಾರಾಡುತ್ತಿರುವ ಹಕ್ಕಿಯು ನಾವು
ಮರೆತು ಎಳು ಬಿಳಿನಾ ನೋವು
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment