ವಚನಗಳು -13




ಉರಿವ ದೀಪ ಬೆಳಕು ನನ್ನಿಂದ ಎಂದು ಹೇಳದು

ಬೆಳಗೋ ಸೂರ್ಯ ನನ್ನಿಂದ ಬೆಳಗಾಯಿತು ಹೇಳದು

ಭೂಮಿ ನನ್ನಿಂದಾನೆ ಜೀವಿಗಳ ಜೀವ ಎಂದು ಹೇಳದು

ನನ್ನಿಂದ ಎಂದು ಹೇಳದೆ ಕಾಯಕ ಮಾಡು ಮನುಜ

ನಮ್ಮ ಬಸವಣ್ಣ ಇಂಗಿತಾ ನಿನಗೆ ತಿಳಿವುದು.


ಹಣ ಹಣ ಎಂದು ಬಡಿದಾಡ ಬೇಡ ಮನುಜ

ಹೆಣ್ಣಿಗಾಗಿ ಹೊಡೆದಾಡ ಬೇಡ ಮನುಜ

ಹೆಣ್ಣು, ಹೊನ್ನು,ಮಣ್ಣು ಮಾಯೆ ಮನುಜ

ನಿಷ್ಠೆಯಿಂದ ಕಾಯಕವ ಮಾಡು ಎಲ್ಲವೂ

ನಿನ್ನಿಂದೆ ಬರುವ ಸಮಯ ದೂರವಿಲ್ಲ ನಮ್ಮ ಬಸವಣ್ಣ


ದೇವರು ದೇವಾಲಯದಲ್ಲಿ ಇಲ್ಲ ಮಗುವೇ

ದೇವರು ಪರ್ವತದ ತಪ್ಪಲಿನಲ್ಲಿ ಇಲ್ಲ ಮಗುವೇ

ದೇವರು ಅರಿಶಿನ ಕುಂಕುಮ ಅಚ್ಚಿದ ಕಲ್ಲುಗಳಲಿ ಇಲ್ಲ

ನೀ ಕಾಯಕವ ನಿಷ್ಠೆಯಿಂದ ಮಾಡಿ ದೇವರನು ಕಾಣು 

ನಮ್ಮ ಬಸವಣ್ಣ


*****************ರಚನೆ ***************

          ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35