ವಚನಗಳು -4
ಬದುಕಿನೊಳು ಹಣವೆಂಬ ಮಾಯೆ
ಹೆಣ್ಣೆಂಬ ಪರ ನಾರಿಯ ಮಾಯೆ
ಮಣ್ಣೇಂಬ ಭೂತಾಯಿಯು ಮಾಯೆ
ಎಲ್ಲರನ್ನು ಕಾಡುವುದು ಈ ಮೂರು ಮಾಯೆ
ಮನಸ್ಸಿನ್ನಲಿ ಲಿಂಗವ ಪೂಜಿಸು ಎಲ್ಲವು ಮಾಯೆ
ಬೆಟ್ಟದಡಿಯಲ್ಲಿ ಕಟ್ಟಿಗೆ ಊರಿದರೆ ಅರಿಸಬಹುದು
ಬೆಟ್ಟದ ಕಾಡಿಗೆ ಬೆಂಕಿ ಬಿದ್ದರೆ
ಬೇಲಿಯೇ ಎದ್ದು ಹೊಲ ಮೇಯ್ದರೆ
ಊಣ್ಣುವ ಅಮೃತವೇ ವಿಷವಾದರೆ
ಮನೆಯ ಯಜಮಾನೆ ಖಜಾನೆ ಬೀಗ ಮುರಿದರೆ
ಯಾರನು ದೂರುವುದು
ಆತ್ಮಲಿಂಗವ ಬೇಡು ಒಲಿವನು ಶಿವನೇ ಬಸವಣ್ಣ
ಹೊಲದಲ್ಲಿ ಕಸಹುಟ್ಟಿ ಹಾಕಿದ ಫಲವ ತಿನ್ನುವಾಗ
ಕಸವನ್ನು ಹಾಗೆ ಬಿಡುವುದೂ.. ಕೀಳುವುದೂ
ಕೆಟ್ಟ ಕಸವನ್ನು ಕಿತ್ತು ಫಲವ ತಿನ್ನು
ಎನ್ನ ಆತ್ಮಲಿಂಗವೆ ಬಸವಣ್ಣ
ಹೆತ್ತ ತಂದೆ ತಾಯಿಯನು ನೋಡಿಕೊಳ್ಳದ ಮಕ್ಕಳ್ಳು
ಕುಡಿತದ ಅಮಲಿನಲಿ ತೇಲುವ ಮನೆಯೋಡೆಯ
ಪರ ಸ್ತ್ರೀ, ಪುರುಷನ ವ್ಯಾಮೋಹ
ಲಿಂಗವನು ಪೂಜಿಸಿದ ಭಕ್ತ ಇದ್ದರೇನು ಇರಾದ್ದಿದರೇನು
ಎನ್ನ ಲಿಂಗವೆ ಕಾಯಕ ಯೋಗಿ ಬಸವಣ್ಣ
************ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment