ನನಗು ಕನಸು ಇದೆ
ಅರಸಿ ಬಂದರು ನನ ಮನೆಗೆ
ಹಗಲು ಇರುಳು ಎನ್ನದೆ
ಸಿಂಗರಿಸಿ ಸೀರೆ ಹುಟ್ಟು ಬಳುಕುವ ನನ್ನ ದೇಹದೊಳಗೆ
ಮೈತುಂಬಾ ಬಟ್ಟೆ ನಾನು ಬಿಚ್ಚಿಟ್ಟೆ
ಕನಸುಗಳ ಮೂಟೆ ಕಟ್ಟಿ ಸುತ್ತಿಟ್ಟೆ
ನನ್ನ ಬದುಕು ಬವಣೆ ಕೇಳುವರು ಯಾರು
ದೇಹವನ್ನು ಉಂಡು ಕುಡಿದು ಗುಂಡು
ಹಾಡಿಹರು ದೇಹವನ್ನು ಚೆಂಡು
ನನಗು ಆಸೆಗಳು ಕನಸುಗಳು ಇವೆ
ನನ್ನ ಹೃದಯದ ಮಾತಿಗೆ ಬೆಲೆ ಇಲ್ಲ
ನನ್ನ ದೇಹಕೆ ಮಾತ್ರ ಬೆಲೆ ಇಲ್ಲಿ
ನುಗ್ಗಿಹರು ಸವುರುತ್ತ ಗಲ್ಲ
ವಯಸ್ಸಿಗೆ ಪರಿಮಿತಿ ಇಲ್ಲ
ಬಾಳೆ ಹಣ್ಣು ತಿಂದು ಎಸೆದ ರೀತಿ
ಜೇವನವಾಯ್ತು ಬದುಕಿ ಸತ್ತ ಹೆಣದ ರೀತಿ
ರೋಕ್ಕ ಬಂದ ಮೇಲೆ ನಾನು ಒಂದು ಮೂಲೆ
ವಯಸ್ಸು ಎಷ್ಟು ದಿನ ದೇಹ ಎಷ್ಟು ದಿನ
ಬಳುಕುವುದು ಬಳ್ಳಿಯಂತೆ
ಕಾವು ಇದ್ದಷ್ಟು ಕ್ಷಣ ಬಾಳು ಬೆಳಕು
ಮಾಗಿದ ಹಣ್ಣ ರೀತಿ ದೇಹ ಹುಳುಕು
ನೋವು ಉಂಡ ಮನಕೆ ಸಾಕು ಈ ತಳುಕು
ನಾಲ್ಕು ಗೋಡೆಯ ಮದ್ಯೆ ಬಂದಿ ನಾನು
ರಾಕ್ಷಸರ ಕೈಗೆ ಸಿಕ್ಕು ಚಿಂದಿ ನಾನು
ಬಣ್ಣದ ಬಣ್ಣದ ಬಟ್ಟೆ ನಾನು ಕಲರಫುಲ್ ಚಿಟ್ಟೆ
ಮನಸ್ಸು ಕನಸ್ಸು ಸುಟ್ಟ ಹೆಣ್ಣು ನಾನು
ನನ್ನವರು ನನಗಿಲ್ಲ ಹೊತ್ತು ತಂದಿಹರು ಇಲ್ಲಿ
ನೆತ್ತರು ಹರಿಸಿರು ನನ್ನ ಕಚ್ಚಿ
ಬಂದು ಉಂಡು ಹೋದವರು
ಎಷ್ಟೋ ಜನ ನನ್ನ ಮೆಚ್ಚಿ
ನನ್ನವರ ನೆನಪು ನನ್ನ ಕಾಡಿಹುದು
ಮತ್ತೆ ನೋಡಲು ಮನಸ್ಸು ಬಯಸಿಹುದು
ಕಾಣದ ಪ್ರೀತಿ ಬಂದು ಬಳಗವ ಬೇಡಿಹುದು
ಎಲ್ಲವೂ ಕನಸ್ಸು ಈಗ ಮನಸ್ಸು ನೊಂದಿದೆ...
ಆಸೆ ಕಳಚಿದೆ ಕಚ್ಚಿ ತುಟಿಯಲಿ ರಕ್ತ ಸೋರಿದೆ
ಸೇರುಗು ಜಾರಿದೆ ಬದುಕು ಕಸಿದಿದೆ
ಕನಸ್ಸುಗಳು ಕಳಚಿದೆ ಜಗವ ಬಿಟ್ಟು
ತಿಂದು ಬಾಳೆಲೆಯ ಹಾಗೆ ದೇಹ ಎಸೆದು ಬಿಟ್ಟು.
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment