ವಚನಗಳು -3




ಇಟ್ಟು ಉಂಡ ಮನೆಗೆ ದ್ರೋಹವು ತರವಲ್ಲ

ಮೆಟ್ಟಿ ನಿಂತ ಬದುಕ ವ್ಯಥೆಗೆ ಶಾಪವು ತರವಲ್ಲ

ಬಾರದ ಒಲವಿಗೆ ಮೋಸವು ತರವಲ್ಲ

ಯೋಚೆನೆಗೆ ಕೈ ಕಟ್ಟಿ ಕುರುವುದು ತರವಲ್ಲ

ಕಾಯಕವಾ ಮಾಡು ಕೈಬಿಸಿ ಕರೆವುದು ಬಸವಣ್ಣನ ಹಾಡು


ಬಿಲ್ವಾ ಪತ್ರೆ ಶಿವನಿಗೆ  ಪ್ರಿಯಾ

ಕಮಲ ಹೂವು ಬ್ರಹ್ಮನಿಗೆ ಪ್ರಿಯಾ

ಎಳು ತಲೆಯ ಹಾವು ವಿಷ್ಣುವಿಗೆ ಪ್ರಿಯಾ

ಕಾಯಕವ ಮಾಡಿ  ನೋಡು

ಇಷ್ಟಲಿಂಗವ ಪೂಜಿಸುವ ನಮ್ಮ ಬಸವಣ್ಣನಿಗೆ ಪ್ರಿಯ


ಸುತ್ತಿ ಸುತ್ತಿ ಸುಳ್ಳು ಹೇಳಬೇಡ

ಒತ್ತಿ ಒತ್ತಿ ಬೇರೆಯವರಿಗೆ ಭಯಪಡಬೇಡ

ನೋಡಿ ನೋಡಿ ಸೌಂದರ್ಯ ಜರಿ ಬೇಡ

ಹೇದರಿ ಹೇದರಿ ಕೆಲಸಕೆ ಇಂಜಾರಿಯಬೇಡ

ಕಾಯಕವ ಮಾಡು ಬಸವಣ್ಣ ದಿನವೂ ಒಲಿವ ನೋಡ


ಸಂಸ್ಕೃತಿ ಇಲ್ಲದೆ ಸಂಸ್ಕಾರ ಹುಟ್ಟದು 

ಭಕ್ತಿಯು ಇಲ್ಲದೆ ಪೂಜೆಯು ಒಲಿಯದು

ಪರಿಜ್ಞಾನವಿಲ್ಲದೆ ಪರಮಾತ್ಮನ ಸಾಕ್ಷಾತ್ಕಾರವಾಗದು

ಕಾಯಕ ಒಂದೂ ಇದ್ದಾರೆ ಸಾಕು ದಿನವೂ

ಬಸವಣ್ಣನ  ಸದೃಷವಾಗುವುದು


*************ರಚನೆ *******************

         ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple