ಬಾವಲಿ
ಬಾನ ಅಂಚಿನ ಹಾದಿಯಲಿ ಬಂದಿ ನಾನು ಈಗ
ಗುಡುಗುತಿಹಾ ಮೊಡವೊಂದು ಸುರಿಸುತಿದೆ ಮೇಘ
ಸುರಿವ ಜಡಿ ಮಳೆಗೆ ಜಾರಿ ಹಾರಿ ಹೋಯ್ತು ಜೀವ
ನೆನೆದು ನೆನೆದು ತಣ್ಣಗಾಗಿ ದೇಹ ಕೇಳಿತು ಬಿಸಿ ಕಾವ
ಮರದ ಕೊಂಬೆಯಲಿ ನೇತಾಡಿ ಜೋತಡುವ ಹಕ್ಕಿ ನಾನು
ಬಾಹುಗಳನ್ನು ನೇತುಬಿಟ್ಟು ತಲೆ ಜೋತು ಬಿಟ್ಟೆ ನಾನು
ಕೂಗಿ ಕೂಗಿ ಶಬ್ದ ಮಾಡಿ ಹಾರುವ ಬಾವಲಿ ನಾನು
ಹಗಲಿನಲಿ ಮರಕೆ ನೇತು ಬಿದ್ದು ಮರೆತೇ ಬಿಟ್ಟೆ ನನ್ನೇ ನಾನು
ಹಣ್ಣು ಕ್ರಿಮಿ ಕೀಟ ಹುಡುಕಿ ಪಾಳು ಬಂಗಲೆ ಅಲೆವೆ
ನಿಫ್ ವೈರಸ್ ನನ್ನಿಂದ ಬರುವುದೆಂದು ನನ್ನ ಕೊಲುವೇ
ನನ್ನ ನೋಡಿ ಶಕುನವೆಂದು ಹೆದರು ತಿರುವ ಮನುಜ ರಾತ್ರಿಯಲಿ ನನ್ನ ಕೂಗಿಗೆ ಭಯಪಡುವುದು ಸಹಜ
ನಾಶದ ಅವನತಿಯಲಿ ನನ್ನ ಜಾತಿ ಪಕ್ಷಿ ಸಂಕುಲ
ಕೊಲ್ಲುವ ಯೋಚನೆಯಲ್ಲಿ ಭೂಮಿಲಿ ಮನುಕುಲ
ಮೊಬೈಲ್ ತರಂಗದಿಂದ ನಾನು ಸಾವ ಸುಳಿಗೆ
ಮನುಷ್ಯನ ಜೀವದ ನೆಲೆಗಾಗಿ ಕೊಂದು ಆ ಘಳಿಗೆ
***************ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment