ರಾವಣ
ಆರಂಭಿಸಿ ಹಾಗಿದೆ ಕಾದಂಬರಿ ರಾವಣ
ಎಂದು ಬರೆದು ಮುಗಿವುದೂ ಮನದಲ್ಲಿ ತಲ್ಲಣ
ನೆನ್ನೆಯ ಮನಸು, ನಾಳೆಯ ಕನಸು, ಇಂದಿನ ಸೋಗಸು
ಮೇಳಯಿಸಿ ಹೊಸತು ಹುಡುಕುವ ಕಾರಣ
ಬೇಗ ಬರೆದು ಮುಗಿಯಲಿ ಕಾದಂಬರಿ ರಾವಣ
ಮಿಂಚುತಿಹಾ ನೀಲಿ ಬಾನಿನಲ್ಲಿ
ಕರಾಗುತಿಹಾ ಮೋಡವೊಂದು
ಸುರಿಸುತಿಹಾ ಜಡಿ ಮಳೆಗೆ
ಮಳೆಹನಿ ಆಯುತು ದಿಬ್ಬಣ
ರಾಮನ ತ್ಯಾಗ ಕಂಡೆ
ಸೀತೆಯ ಪ್ರೀತಿ ನಲಿವ ಕಂಡೆ
ಲಕ್ಷ್ಮಣನ ತಾಳ್ಮೆ ಕಂಡೆ
ಹನುಮನ ಭಕ್ತಿ ಪೂಜೆ ಕಂಡೆ
ಸೀತೆಯನು ಅಪಹರಿಸಿದ ರಾವಣ
ಲಂಕೇಯನು ಬಾಲದಿ ಸುಟ್ಟ ಹನುಮ
ಸುರಿವ ಮಳೆಹನೀಯ ರಕ್ತ ದಿಬ್ಬಣ
ರಾವಣನು ಕಾರಣವೇ ನಡೆಯಲು ರಾಮಾಯಣ
************ರಚನೆ ****************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment