ವಚನಗಳು -16
ದೇವನೂಬ್ಬ ನಾಮ ಹಲವೂ
ಜಾತಿ ನೂರು ಮನುಜ ಕುಲವೊಂದೇ
ಸಕಲ ಪ್ರಾಣಿಗಳಲಿ ಹರಿವುದು ರಕ್ತವೆ
ಮಾಡುವ ಕಾಯಕ ನಮ್ಮ ಗುರಿತಿಸುವುದು ನಮ್ಮ ಬಸವಣ್ಣ
ಉರಿವ ಬೆಂಕಿಗೆ ತುಪ್ಪ ಹಾಕಿದರೆ ಧರೆಗೆ ಅವರಿಸುವುದು
ಸಂಸಾರದಲ್ಲಿ ಹುಳಿ ಹಿಂಡಿದರೆ ಮಸಣವಾಗುವುದು
ತಂದಿಕ್ಕಿ ತಮ್ಮಾಷೆ ನೋಡಬೇಡ ಓ ಮನುಜ
ಶ್ರದ್ದೆಯಿಂದ ಉತ್ತಮ ಕಾಯಕವ ಮಾಡು ಒಳಿತಾಗುವುದು
ನಮ್ಮ ಬಸವಣ್ಣ
ಮನದಲ್ಲಿ ಶಿವನ ಚಿಂತೆಯ ಮಾಡು
ಶಿವನಲ್ಲಿ ಒಳಿತನ್ನು ಬೇಡು
ಮನಸ್ಸು ಶುದ್ದಿಯಾಗಿಟ್ಟು ನೋಡು
ಮಾಡುವ ಕಾಯಕವ ಕೈ ಮುಗಿದು ಮಾಡು
ಸ್ವರ್ಗದ ಬಾಗಿಲು ತೇರೇವುದು ನೋಡು ನಮ್ಮ ಬಸವಣ್ಣ
**************ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment