ಬದುಕು ಬರಿದು




ಬದುಕು ಬರಿದಾದ ಮೇಲೆ ಮುಖದಿ ನಗುವೆಲ್ಲಿದೆ

ನೋವು ನೂರೆಂಟು ಹಾಗಿ ಕಣ್ಣ ನೀರು ಬತ್ತಿದೆ

ಮನದಿ ಚಿಂತೆಯ ಬೇರು ನನ್ನ ಮನವ ಸುಡುತಿದೆ

ಆಟವ ಆಡಿಸುವತನ ಕೈಲಿ ಎಲ್ಲಾ ಅಡಗಿದೆ


ಯಾರಿಗೆ ಏಳಲಿ ದುಃಖ್ಖ ಮನದ ಕಟ್ಟೆ ಹೊಡೆದಿದೆ

ಪ್ರತಿ ಕ್ಷಣವೂ ನಿನ್ನ ಯೋಚನೆ ಮನೆ ಮಾಡಿದೆ

ಬಾರೆ ನನ್ನ ಒಲವೇ ನೋವು ಮರೆಸುವ ಚೆಲುವೆ

ಎಲ್ಲಿರುವೆ ನೀನು, ಎಗೆ ಹುಡುಕಲಿ ನಿನ್ನ ಓ ಮನವೇ


ಕಾಣದ ದಾರಿಯಲ್ಲಿ ನಾ ಹಾಗೆ ಸಿಲುಕಿದೆ

ನಿನ್ನ ಕಾಣದೆ ಏಕೋ ನನ್ನ ತನುವು ಕಲಕಿದೆ

ಮುಂಗಾರು ಮಳೆಯ ರೀತಿ ನಿನ ಆಗಮನಕೆ ಕಾದು

ಮಣ್ಣು ಅಸನಗೋ ರೀತಿ ನನ ಘಾಯ ಮಾದು


ಹಸಿರು ಹುಟ್ಟುವ ರೀತಿ ನನ ಕನಸ್ಸು ಚಿಗುರಲು

ಗಿಡ ಮರ ಬಳ್ಳಿ ಹೂವು ಬಿಟ್ಟು ಆಸೆ ಕರೆಯಲು

ಮನದಿ ಕಾಡಿದ ನೋವು ಕಣ್ಮರೆಯಾಗಲು

ನೀನೇ ನನ್ನ ಊಸಿರು ಎಂದು ಒಲವಲ್ಲಿ ಬರೆಯಲು


ನೂರಾಸೆ ಹೊತ್ತ ಬದುಕು ಹಣತೆಯಂತೆ ಊರಿಯಲು 

ನೀನು ಬಳಿ ಬಂದು ಬಾಳುಹುಣ್ಣಿಮೆಯಂತೆ ಬೆಳಗಲು

ಮುದುಡಿದ ತಾವರೆಯಂತೆ ಕನಸು ಮನಸು ಅರಳಿದೆ 

ಜೀವನದಿ ಬೆಂದ ಸೂರು ನಮ್ಮನಿಗಾ ಮತ್ತೆ ಕರೆದಿದೆ


ವಿಧಿಯ ಕೈಲಿ ಬೊಂಬೆಯಂತೆ ನಮ್ಮ ಜೀವನ

ಆಡಿಸುವತನು ಕುಣಿಸುವಂತೆ ಕುಣಿವ ನಾವು ಅನುದಿನ

ಕಾಣದತ ಕರೆದು ವರವ ನೀಡಲು ಒಮ್ಮೆ ನಾವು ಬೇಡಲು

ಬಾಳು ಬಂಗಾರ ಬರಡು ಬದುಕು ಹಸಿರು ಸುರಿಸಲು 


*************ರಚನೆ ***************

         ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35