ನಮ್ಮೂರ ಕಾಫೀ
ಕಾಫೀ ವರ್ಣನೆ ತೋಟದ ಬಣ್ಣನೆ
ಬಿಸಿ ಕಾಫೀ ಕುಡಿಯುತ ತಣ್ಣಗೆ
ಮನ ಸೋಲದವರಿಲ್ಲ ಕಾಫಿ ರುಚಿಗೆ
ಪ್ರಕೃತಿ ಮಡಿಲಲಿ ಕಾಫೀ ಸವಿದರೆ
ಉಲ್ಲಾಸದಲಿ ಮೈಮನ ಮಿಂದರೆ.
ಚಿಕಮಗಳೂರು ಕಾಫೀ ಚೆನ್ನ ಬೆಟ್ಟ ಗುಡ್ಡ ಕೈಬಿಸಿ ಕರೆಯಿತು ನನ್ನ
ಅಮ್ಮ ಮಾಡಿದ ಕಾಫೀ ಸವಿಯುತ
ನೊರೆಯ ಹಾಲಾಲಿ ಕಾಫಿ ತುಟಿಯ ಸವರುತ
ರುಚಿಯು ನಾಲಿಗೆ ತಾಕಿತು
ನೂರೆಂಟು ಚಿಂತೆಯ ಮರೆಯಿತು
ಹೂವು ಬಿಟ್ಟ ಕಾಫೀ ಪರಿಮಳ
ಹೂವು ತೋಟದಿ ಪಳ ಪಳ
ಸುವಾಸನೆ ನನ್ನ ಮೂಗು ತಾಕಿರಲು
ಸ್ವರ್ಗದಿ ನಾನು ಹಾಗೆ ತೇಲಿದೆ
ಕಾಫೀ ಹೂವಿಗೆ ಸಾಟಿ ಎಲ್ಲಿದೆ
ಕಾಫಿ ನೆಟ್ಟ ಹಸಿರು ಬೆಟ್ಟ
ಗಿಡ ಮರ ಬಳ್ಳಿಯ ಘಟ್ಟ
ಮನಸೆಳೆಯಿತು ಹಾಗೇ ನನ್ನ
ಸವಿದೆ ಪ್ರಕೃತಿ ಸೊಬಗನ್ನ
********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment