ವಚನಗಳು -6




ಬೇಡಿ ಬೇಡಿ ಕರಗಿದವರಿಲ್ಲ

ನೀಡಿ ನೀಡಿ ಕಳೆದು ಕೊಂಡವರಿಲ್ಲ

ಎಲ್ಲರು ಕಾಯಕವೆಂಬ ಭಕ್ತಿಯ ಭಿಕ್ಷೆ

ನೀಡಿದರೆ ಆತ್ಮಲಿಂಗವು ಮೆಚ್ಚುವುದು ಕೇಳಾ


ಜಗದಲಿ ಹಿರಿಯ ಕಿರಿಯರೆಂಬ ಬೇದವಿಲ್ಲ

ಭಕ್ತಿಗೆ ವಯಸ್ಸಿನ ಹಂಗಿಲ್ಲ

ಆತ್ಮ ಸಾಕ್ಷಿ, ಮನಸಾಕ್ಷಿ ಕಾಯಕವ ಮಾಡು

ಬಸವಣ್ಣ ಮೆಚ್ಚಿ ದಿವ್ಯ ಶಕ್ತಿ ಸಿಗುವುದು ನೋಡ


ಜಗದಿ ದೇವರು ಸಾವಿರಾರು ಎಣಿಸಿನೋಡ 

ಪೂಜೆಗೈವರು ದೇವರುಗಳಿಗೆ ಭಕ್ತಿಯಲ್ಲಿ

ಬೇಡುವರು ವರವ ಸಿಕ್ಕ ಸಿಕ್ಕ ದೇವರುಗಳಲಿ

ಹಿಡಿದ ಕಾಯಕವ ಮಾಡಿ ನೋಡ ಕೈಲಾಸ ದೊರಕುವುದು


****†**********ರಚನೆ ************

          ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35