ಕನಸುಗಳ ಗೂಡು
ಬದುಕು ಪಯಣದ ಊರು
ನೆನಪುಗಳು ಮನೆಯ ಸೂರು
ಓಡುತಿರುವ ಕಾಲ ವಿಧಿಯ ತೇರು
ನಾಲ್ಕು ದಿನದ ಜಾತ್ರೆ ಜೋರು
ಕನಸುಗಳ ಯಾತ್ರೆ ಗೂಡು
ಮನದಿ ನೂರೆಂಟು ಆಸೆ ನೋಡು
ದಿನವೂ ಕಳೆದು ಒಲವ ಹಾಡು
ಜೀವನ ಜೋಕಾಲಿ ತೂಗಾಡು
ಆಡುವ ಆಟ ನವನವಿನ
ಬಾಳು ಸುಂದರ ನಗುವಿನ
ನೋವ ಮರೆತು ಗೆಲುವಿನ
ಓಡುತಿರುವ ಸಮಯ ಸೋಪಾನ
ಕುಂಟುತ್ತಿರುವ ಆಸೆಗಳೇ
ನೂರೆಂಟು ಬಯಕೆಗಳೇ
ಸ್ವಲ್ಪ ಕಾಲ ತಡೆಯಿರಿ
ನೋವುಗಳ ಸಹಿಸಿರಿ
ನಾಳೆಗಳ ತುಳಿಯಿರಿ
ನೆನ್ನೆಗಳ ಮರೆಯಿರಿ
ಈ ದಿನವನ್ನು ಸವಿಯಿರಿ
ಹಕ್ಕಿಯಾಗೆ ಹಾರುವಸೆ
ಸಮುದ್ರದಿ ತೇಲುವಾಸೆ
ಮುಗಿಲಿನಿಂದ ಬೀಳುವಾಸೆ
ವಿಧಿಯ ಕೈಲಿ ಇಡೀವಾಸೆ
ಮೋಡಕೆ ಡಿಕ್ಕಿ ಹೊಡೆವಾಸೆ
ಸೂರ್ಯನನ್ನು ಸುಡುವಾಸೆ
ಯಾರಿಗಾಗಿ ಈ ಪಯಣ ಕನಸ ಗೂಡು ದೇವರೆ ಕಾರಣ
********ರಚನೆ ***-****-
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment