ಮುಗಿದ ಯುಗಾದಿ
ಮಾವಿನ ಎಲೆಯ ತಂದು
ಬಾಗಿಲು ಕೇಳಿತು ತೋರಣ
ಬಾಳೆದೆಲೆಯ ಮೇಲೆ
ಅಮ್ಮ ತಟ್ಟುತ್ತಿದದ್ದಳು ಊರಣ
ಮೈಗೆ ಅರಿಸಿನದ ಎಣ್ಣೆ ಹಚ್ಚಿ
ಬಿಸಿಲ ಜಳದಿ ಊರು ಸುತ್ತಿ
ತೋಟದಲ್ಲಿ ಕಂಡ ಮಾವು ತಿಂದು
ಊರ ಕೆರೆಯ ನೀರಲ್ಲಿ ಈಜಿ
ಮನೆಗೆ ಬಂದು ಸೀಗೆ ಸ್ನಾನ ಮಾಡಿ
ಊರ ದೇವರ ಗುಡಿಗೆ ಎಡೆ
ಹೊಸ ಹುಡಿಗೆ ತೊಟ್ಟು ನೆಡೆ
ದಾರೀಲಿ ಕಾಣತ್ತು ಹೂವ ಜಡೆ
ಮನೆಗೆ ಬಂದು ಒಬ್ಬಿಟ್ಟು ಉಂಡು
ಸಂಜೆ ನೋಡಬೇಕು ಚಂದ್ರ ತುಂಡು
ಕಾದು ಕುಳಿತರು ಕಾಣದ ಚಂದ್ರ
ಅವಿತ ಏಕೋ ಮೋಡದ ಮರೆಯಲಿ
ಹೇಗೆ ನಾನು ಕೂಗಿ ಕರೆಯಲಿ
ನೋಡಿ ಸೋತರುನು ಕಾಣಲಿಲ್ಲ
ಹೊಸ ವರ್ಷ ಹೊಸತು ಏನಿಸಲಿಲ್ಲ
ಮರುದಿನ ಕಂಡ ಚಂದ್ರ ನೋಡಿ
ತಂದೆ ತಾಯಿ ಆಶೀರ್ವಾದ ಪಡೆದು
ಬೇವು ಬೆಲ್ಲ ಕಹಿಸಿಹಿ ತಿಂದು
ಕಂಡೆ ನಾನು ಗಣಪನ
ಕೈಮುಗಿದು ಬೇಡಿ ಓ ಗುರುವೇ
ಒಳಿತು ಮಾಡು ನೀನು
ಬಾರಾದಾಗೆ ಏನು ಕೇಡು
ಮಳೆ ಬೆಳೆ ಸಮೃದ್ಧಿ ಇರಲಿ
ರೈತನ ಮೊಗದಿ ನಗುವು ತುಂಬಿರಲಿ......
ಯುಗಾದಿ ಮುಗಿದ ಈ ದಿನ
ಮತ್ತೆ ಕಾಯೋಣ ಶುಭ ದಿನ
********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment