ಸಂವಿಧಾನ ಶಿಲ್ಪಿ
ಅಸ್ಪುರ್ಶತೆಯ ಸಮಾಜದಲ್ಲಿ ಹುಟ್ಟಿ
ಗುಲಾಮಗಿರಿಯನು ಮೆಟ್ಟಿ
ಜಾತಿ ದಬ್ಬಾಳಿಕೆಗೆ ತೊಡೆ ತಟ್ಟಿ
ಬೆಳೆದು ಬಂದೆ ನೀ ಸಮಾಜವ ಪುಡಿ ಗಟ್ಟಿ
ವಿದ್ಯೆಯೇ ನಿನ್ನಯ ಅಸ್ತ್ರ
ಪುಸ್ತಕವೇ ನಿನ್ನಯ ಶಸ್ತ್ರ
ದಣಿವರಿಯದ ನಿನ್ನಯ ಓದು
ಕುಣಿಯುವವರ ಕುಟ್ಟಿತು ಅಸಮಾನತೆಯಲಿ ಮೇದು
ಹೆಜ್ಜೆ ಹೆಜ್ಜೆಗೂ ಅವಮಾನ
ಮರೆಯಲಿಲ್ಲ ನೀನು ಸ್ವಾಭಿಮಾನ
ನಿನ್ನ ನೋಡಿದವರಿಗೆ ಏಕೋ ಬಿಗುಮಾನ
ಮೆಟ್ಟಿ ನಿಂತೆ ನೀ ಅಸ್ಪುರುಷತೆಯನ್ನ
ರಾಜಕೀಯದಿ ಸಿಗಲಿಲ್ಲ ಯಶಸ್ಸು
ಶೋಷಿತ ವರ್ಗಕೆ ನಿನ್ನಯ ತಪಸ್ಸು
ಮಡಿವಂತರಿಗೆ ನಿನ್ನಮೇಲೆ ಮುನಿಸು
ಕಂಡೆ ನೀನು ಸ್ವಾತಂತ್ರ್ಯದ ಕನಸ್ಸು
ಸಂವಿಧಾನದ ಶಿಲ್ಪಿ ನೀನು
ಪ್ರಜಾಬ್ರಭುತ್ವದ ಹಾದಿ ನೀನು
ಸಮಾನತೆ ಸಾರಿದ ವೀರ ನೀನು
ಶೋಷಣೆಯ ಕೊನೆಯೇ ನೀನು
ನಮ್ಮ ಭಾರತ ಸಾರಿದೆ ನಿನ್ನ ಹೆಸರು
ನಮ್ಮ ಸಂವಿಧಾನಕೆ ನಿನ್ನ ಬರಹವೇ ಉಸಿರು
ಅಚ್ಚಳಿಯದೆ ಊಳಿದಿದೆ ನಿನ್ನ ಹೆಸರು
ಜಾತಿ ಶೋಷಿತ ವರ್ಗಕೆ ನೀನೇ ಹಸಿರು
ಡಾ. ಬಿ. ಆರ್. ಅಂಬೇಡ್ಕರ್
*********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment