ಗಗನ ಕುಸುಮ




ಆಕಾಶದಿ ಅರಳಿದ ಸುಮವೇ

ನಕ್ಷತ್ರದ ಗೂಡಿನ ಭನವೇ

ಹೂವದೋಟದಲ್ಲಿ ಗಮವೇ

ಮನಸ್ಸಿನ ಆಸೆ ಗಗನ ಕುಸುಮವೇ


ಕಂಡ ಕನಸಿನಲಿ ಸೋತು

ಮನದಾಚಿಂತೆಯಲಿ ಹುತು

ನಿನಗಾಗಿ ಮೌನದ ಮಾತು

ಹುಕ್ಕುತಿಹಾ ಪ್ರಣಯಕೆ ನೇತು


ಬಿಸಿ ಅಪ್ಪುಗೆಯಲಿ ಸೊಗಸಿಲ್ಲ

ಮನದ ನೋವಿಗೆ ಮದ್ದಿಲ್ಲ

ನೊರೆಂಟು ಆಸೆಗೆ ಸಾವಿಲ್ಲ               

ಕನಸು ಗಗನ ಕುಸುಮವೇ ಎಲ್ಲಾ


ಬಯಸಿದ ಬಯಕೆ ತಣ್ಣೀರು

ಹೀಡೇರದ ಕನಸ್ಸು ಬಿಸಿನೀರು

ಅರಳಿದ ಯೌವ್ವನ ಎಳನೀರು

ನನ್ನಾಸೆ ಹೂವು ಮಳೆ ನೀರು


ಗಗನದಿ ಅರಳಿದ ತಾರೆಗಳು ನಕ್ಕು

ಇರುಳಿನ ಚಂದ್ರಮಗೆ ಸೋಕ್ಕು

ನೀಲಿ ಆಕಾಶದೆ ಏಕೋ ಬಿಳಿ ಸುಕ್ಕು

ನನ್ನವೋಲವ ಗಗನಕುಸುಮ       

   ಕೈಗೇಟುಕದ ದಿಕ್ಕು 


ಬಾಳ ಪಯಣದಿ ಅರಳಿ ಸುಮಾ

ಬೀರಲಿಲ್ಲ ಬದುಕಲಿ ಘಮ

ಸೋತು ಸುಮ್ಮನಾದಮೇಲೆ

ನನ್ನವಳ ಹೆಸರೇ ಗಗನಕುಸುಮ


*********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35