ವಚನಗಳು -2
ದುರ್ಜನರು ತಂದಾರು ಬಾಳಿನಲಿ ದುರಭಾಗ್ಯ
ಸಜ್ಜನರು ತಂದಾರು ಬಾಳಿನಲಿ ಸೌಭಾಗ್ಯ
ಮತ್ತಿಗೆಟ್ಟ ಜನರು ಮತಿಮೀರಿ ನಡೆದಿರಲು
ಉಳಿಗಾಲವಿಲ್ಲಾ ಆದರ್ಶದ ಜನಕೆ
ಗುರುವು ಇರುವೆಡೆ ಅರಿವು ಇರಬೇಕು
ನಗು ಇರುವೆಡೆ ನಲಿವು ಇರಬೇಕು
ಪ್ರೀತಿ ಇರುವೆಡೆ ವಾತ್ಸಲ್ಯ ಇರಬೇಕು
ಆತ್ಮಲಿಂಗವಿರುವೆಡೆ ಶಿವನು ಕುಣಿವನು
ನೋಡ ಸೊಕ್ಕಿ ಮೆರೆವ ಮನುಜ
ಪರರ ಚಿಂತೆ ಮಾಡಿದರೆ ಪಂಗನಾಮ
ಒಳಿತಿನ ಚಿಂತೆ ಓಳಿತಿಗೆ ಮರುನಾಮ
ಸವಿ ಮಾತ ಚಿಂತೆ ಇದ್ದಂಗೆ ಸವಿನಾಮ
ಕೆಡುಕಿನ ಚಿಂತೆ ನೆನೆದವರ ನಿರ್ನಾಮ
ಲಿಂಗದ ಚಿಂತೆ ಮನಸ್ಸಿಗೆ ಶುದ್ದಿ ನಾಮ
ಕೆಡುಕ ಬಯಸಬೇಡ ಕೇಡು ನಿನಗೆ
ಖುಷಿಯ ಅಂಚಿ ನೋಡ ಖುಷಿ ನಿನಗೆ
ನೋವ ಅಂಚಿ ನೋಡ ಒಲವು ನಿನಗೆ
ಇಷ್ಟಲಿಂಗವ ಮೆಚ್ಚಿ ನೋಡ ಬಸವಣ್ಣ ಒಲಿವ ನಿನಗೆ
**†**************ರಚನೆ ************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment