ವಚನಗಳು -12
ಲಿಂಗವೆಂಬ ಬೀಜವು ಮಣ್ಣಾಗಿ
ಮಣ್ಣಿನಲಿ ಬೀಜವು ಭಕ್ತಿಯ ಮೊಳಕೆಯಾಗಿ
ಮೊಳಕೆಯು ಮಳೆಹನಿಗೆ ಗಿಡವಾಗಿ
ಗಿಡವು ಕಾಲದಿ ಬೆಳೆದು ಮರವಾಗಿ
ಮರವು ಹೂವುಬಿಟ್ಟು ಹಣ್ಣಾಗಿ
ಹಣ್ಣು ಸವಿದು ಬೀಜವೆಂಬ ಲಿಂಗವು
ಮಣ್ಣಿಗೆ ಸೇರುವುದೇ ಕಾಯಕ ನೋಡ ನಮ್ಮ ಬಸವಣ್ಣ
ಹೆತ್ತವರು ನೀವು
ಹೊತ್ತವರು ನೀವು
ಬೆಳೆದು ಭಕ್ತಿಯಲಿ ಕಾಯುವರು ನೀವು
ನಿಮ್ಮ ಕಾಯಕವೇ ನನ್ನ ಜೀವನ ಯೋಗಿ ಬಸವಣ್ಣ
ನಿದ್ದೆ ಮಾಡುವವರ ಎಬ್ಬಿಸಬಹುದು
ಕೆಲಸವೇ ಗೊತ್ತಿಲ್ಲದವರಿಗೆ ಕಲಿಸಬಹುದು
ತಿಳಿದು ತಿಳಿಯದೆ ನಟಿಸುವವರ
ತಿಳಿಯುವುದು ಕಷ್ಟ ಕಣ್ಣಯ್ಯ
ಕಾಯಕವ ಮಾಡು ಭಕ್ತಿಯ ಕಣಜವಾಗು ನಮ್ಮ ಬಸವಣ್ಣ
***********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment