Posts

Showing posts from October, 2021

ಕನ್ನಡ

Image
ಅಮ್ಮು ಬಿಮ್ಮು ಇಲ್ಲದ ನಮ್ಮ ಕನ್ನಡಿಗ ಕನಸ್ಸು ಕಟ್ಟಿ ಮನಸ್ಸು ಗೆಲ್ಲೊ ಕನ್ನಡಿಗ ಒಲವಿನಿಂದ ಹೃದಯ ಬೆಸೆಯೊ ಕನ್ನಡಿಗ ತಾಯಿ ಕನ್ನಡಾಂಬೆಯ ಪುತ್ರ ಕನ್ನಡಿಗ ಪ್ರೀತಿಯಿಂದ ಪ್ರೀತಿ ಅಂಚೋ ನಮ್ಮ ಕನ್ನಡತಿ ಅಣತೆ ಅಚ್ಚಿ ಮನೆಯ ಬೆಳಗೋ ಕನ್ನಡತಿ ಮನಸ್ಸುಗಳ ಮಧುರಮಾತು ಕನ್ನಡತಿ ಜೀವಗಳಿಗೆ ಜೀವ ನೀಡೋ ಕನ್ನಡಾಂಬೆಯ ಪುತ್ರಿ ಕನ್ನಡತಿ ನದಿಗಳು ಹರಿದು ಹಸಿರು ತುಗೋ ನಮ್ಮ ನಾಡು ಕನ್ನಡ ಮಣ್ಣಿನಿಂದ ಚಿನ್ನ ತಗಿವ ನಾಡು ಕನ್ನಡ ಶಿಲ್ಪಾ ಕಲೆಯ ನೆಲೆಯು ನಮ್ಮ ಕನ್ನಡ ಬುದೇವಿ ಬೆಳೆವ ಅನ್ನದ ಬಿಡು ಕನ್ನಡ ಭಾಷೆ ಭೇದ ಮರೆತು ಸಾಕಿಹಳು ಕನ್ನಡ ತಾಯಿ ನಾವು ಎಲ್ಲಾ ಒಂದೇ ಎಂದು ನಂಬಿಹಳು ಕನ್ನಡ ತಾಯಿ ವಿದ್ಯೆ ಕಲಿಸಿ ಬುದ್ದಿ ತಿಳಿಸಿ ಬೆಳೆಸೋ ಕನ್ನಡ ತಾಯಿ ಅಸೆ ಅರಿತು ಕನಸು ಬೆಳೆಸೋ ನಮ್ಮ ಕನ್ನಡ ತಾಯಿ *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನೋವು

Image
ಬದುಕು ಬರಿಸಿದ ನೋವು ನಾ ತೀರಿಸಿಲೆಗೆ ನಿನ್ನಯ ಮನಸಸ್ಸಿನ ವ್ಯಥೆಯ ನಾ ಕೇಳಲೆಗೆ ಬರಿದಾದ ಒಲವಿಗೆ ಬಣ್ಣವ ನಾ ಅಚ್ಚಲೆಗೆ ಕನಸು ತುಂಬಿದ ಹೃದಯಕೆ ನಾ ಚುಚ್ಚುಲೆಗೆ ನೋವು ಅಚ್ಚಿದ ಬೆಂಕಿ ಹಾರಿವೋಯ್ತು ಪ್ರೀತಿ ಅಚ್ಚಿದ ತಣ್ಣೀರು ಜಾರಿವೋಯ್ತು ಕಂಡ ಕನಸು ಮನದಲಿ ಬಂಧುವೊಯ್ತು ನನ್ನಾಸೆ ಏಕೋ ನನ್ನನ್ನೇಕೊಂದುವೋಯ್ತು ನನಗೆ ಮಿಡಿದ ಮನವು ನೀರಿನಲ್ಲಿ ಬಿತ್ತು ಒಲವ ಬೇಗೆಗೆ ಛಲವು ಮುರಿದು ಬಿತ್ತು ಅರಿವ ನೀರಿಗೆ ಅಸೆ ಅಡ್ಡ ಬಂತು ಹೂವು ಒಂದೂ ನಸು ನಕ್ಕು ಬಳಿ ಬಂತು ಒ ಒಲವೇ ನಿನೆಗೆ ನನ್ನ ಬಿಟ್ಟು ನಿಂತೆ ನನ ಮನಸ್ಸು ಕಲೆಂದು ಕುಟ್ಟಿ ಕುಂತೆ  ಆಸೆಯೂ ಸಡಗರದಿ ಬೆಚ್ಚಿ ಬಂತೆ  ಒ ಮನವೇ ನನ್ನ ಒಲವೇ ನೀನೇಕೆ ಸುಮ್ಮನೆ ತಿರುಗಿದಂತೆ  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ವಿಧಿಯೂ ಕ್ರೂರ

Image
ಪ್ರೀತಿ ನೀಡೋ ಮನಸಿಗೆ ಸ್ಮಶಾನವೇಕೆ ಹಾಸಿಗೆ ನೋವು ಪಡುವ ಹೃದಯಕೆ ಚಳಿಗಾಲ ಕೂಡ ಬೇಸಗೆ ಮನಸ್ಸು ಮುಗಿದು  ಹೃದಯ ಹರಿದು ಒಲವ ತೇರದು ನೀನೇಕೆ ಹೊರಟೆ ಯಾತ್ರೆಗೆ ಕಾಲ ಒಂದೂ ವಿಧಿಯ ಗೊಂಬೆ ನಾವಿದರ ಆಡು ಬೋಂಬೆ ಹಸಿರು ಗಿಡದ ನಿಂಬೆ ಬ್ರಹ್ಮ ನಿನ್ನ ಕೈಯಲ್ಲಿ  ಬರಹ ಏಕೆ ಬರೆದೆ ಆಣೆಯಲಿ ಕಾಲವೊಂದು ಘೋರ ವಿದಿಯು ಇನ್ನು ಕ್ರೂರ ಮನಸ್ಸು ಏಕೋ ಬಾರ ಸಾಗಿತೆಕೆ ಬದುಕು ಕಾಣದ ತೀರ ನೂರು ಜನ್ಮ ಪಡೆದರೇನು ಹಣವ ತುಂಬಾ ಮಾಡಿದರೇನು ಜನದ ಪ್ರೀತಿ ಗಳಿಸಿದರೇನು ಬ್ರಹ್ಮ ಬರೆದ ವಿದಿಯು ನಮ್ಮ ಬಿಟ್ಟಿತೆ ಮೆಲುಕು ಹಾಕೋ ಕಾಲವನ್ನು ಸುಟ್ಟಿತೆ ಈ ಜನ್ಮದಲಿ ಮತೊಮ್ಮೆ ಈ ಜೀವ ಹುಟ್ಟಿತೆ  *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಅಭಿಮಾನಿ

Image
ಕನ್ನಡದ ಕಣ್ಣಮಣಿ ಅಭಿಮಾನಿಗಳ ಅರಗಿಣಿ ಒಲವಿನ ಸವಿ ದಣಿ ಕರುಣೆಯ ಚಿನ್ನದ ಗಣಿ ಅಭಿಮಾನಿಗಳ ಮನ ಮಿಡಿತ ಯುವಕರ ಎದೆ ಬಡಿತ ನಾಟ್ಯದ ಅತಿರಥ ಕನ್ನಡದ ಮಹಾರಥಾ ಸ್ನೇಹವೇ ಇವನ ಉಸಿರು ಪ್ರೀತಿಯೇ ಅವನ ಹೆಸರು ಮಾಡುವ ಕೆಲಸದಲಿ ಚೇಲವು ಇವನು ನಂಬಿದ ಗೆಲುವು ಕನ್ನಡದ ಮುದ್ದಿನ ಕುವರ ಜನಪ್ರಿತಿ ಗೆದ್ದ ವೀರ ಮನಸ್ಸು ಕದ್ದ ಚೋರ ನಮ್ಮ ಪ್ರೀತಿ ಪುನೀತರಾಜಕುಮಾರ ತೋರಲಿಲ್ಲ ಅಹಂಕಾರ ಬೀಗಲ್ಲಿಲ್ಲಾ ಮಾಡಿ ಉಪಕಾರ ಜೇವನವೇ ಪರೋಪಕಾರ ತಂದೆ ಹಾದಿಯಲಿ ನಡೆದ ರಾಜಕುಮಾರ ವಿಧಿಯ ಆಟದಿ ನಿಂತಿತು ಹೃದಯ ಸಂಚಾರ 🙏🏼💐💐💐ಕನ್ನಡದ ನಟ ಪುನೀತರಾಜಕುಮಾರ ಆತ್ಮಕೆ ಶಾಂತಿ ಸಿಗಲಿ💐💐💐🙏🏼 ********ರಚನೆ *******, ಡಾ. ಚಂದ್ರಶೇಖರ. ಸಿ. ಹೆಚ್

ಓ ಹುಡುಗಿ

Image
ಭಗವಂತ ತಿದ್ದಿ ತೀಡಿದ ನೀನಂದ ನಿ ನನಗೇನೇ ಸಿಗಲೆಂದ ಸಿಕ್ಕಾಗ ಯಾಕೋ ನಿ ನಕ್ಕೆ ಓ ಹುಡುಗಿ ಬಲು ಸೊಕ್ಕೆ ಮೂಗಿನ ತುದಿಯಲಿ ಕೋಪ ಯಾರು ನೀಡಿದರು ಶಾಪ ಮನಸ್ಸು ತುಂಬಾ ಬಾರಿ ತಾಪ ನ ಹೇಗೆ ಹೇಳಲ್ಲಿ ಓ ರೂಪ ನಡುಗೆಯಲಿ ಬಿಗುಮಾನ ಹುಡುಗೆಯಲಿ ನಿ ಮೌನ ಹೃದಯ ಏಕೋ ಕಂಪನ ರೂಪವೇ ಸಿಕ್ಕ ಬಹುಮಾನ ಮಾತು ಒಂದೂ ಅವಸರ ನಡೆಯು ಏಕೋ ಅತಿಸರ ಪ್ರೀತಿಯ ನಿನ್ನ ಅವಸರ ಹಾಡಿದಂತೆ ಮಧುರ ಸ್ವರ ನೋಟವೊಂದು ಬುಲೆಟ್ ಗುರಿಟ್ಟರೆ  ಏಕೋ ಶೂಟೌಟ್ ನಕ್ಕರೆ ನಿ ಕ್ನೌಕ್ ಔಟ್ ಪ್ರೀತಿಯಿಂದ ಕಿಕ್ ಔಟ್ ಭಗವಂತ ತಿದ್ದಿ ತೀಡಿದ ನೀನಂದ ನಿ ನನಗೇನೇ ಸಿಗಲೆಂದ ಸಿಕ್ಕಾಗ ಯಾಕೋ ನಿ ನಕ್ಕೆ ಓ ಹುಡುಗಿ ಬಲು ಸೊಕ್ಕೆ ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮನಸ್ಸು

Image
ಮನಸ್ಸು ಎಂಬುದು ಮುದ್ದಾದ ಕರ್ಮ ದೇವರಿಗೆ ಗೋತ್ತು ಏನದರ ಮರ್ಮ  ಯಾರಿಗೂ ತಿಳಿಯದ ಸೊಬಗು ಆರಿತವನೆ ಬಲ್ಲ ಅದರ ಮೆರಗು ನಿಂತಲ್ಲಿ ನಿಲ್ಲುತಿಲ್ಲಾ ಕುಂತಲಿ ಕುರುತಿಲ್ಲಾ  ಸೆಕೆಂಡುಗಳಲಿ ಪ್ರಪಂಚ್ ಸುತ್ತಿ ಮತ್ತೆ ಬಂದು ಬೂಪಾಟವ ಒತ್ತಿ ತಿಳಿಯದೆ ಬಂದು ಸೇರುವುದು ನಮ್ಮ ನೆತ್ತಿ ಅರಿಯಲೋರೇಟೇ ಅದರ ಮಾಯೆ ಕಣ್ಣಿಗೆ ಕಾಣಲಿಲ್ಲ ಏಕೋ ಛಾಯೆ ಇಡಿದರು ಸಿಕ್ಕುತ್ತಿಲ್ಲ ಹುಡುಕಿದರೂ ಸಿಗಲ್ಲಿಲ್ಲ   ಏಕೆ ಎಂದು ತಿಳಿಯಲ್ಲಿಲ್ಲ   ದೇವಾ ಸೃಷ್ಟಿಸಿದ ಮನಸ್ಸು ಬಿತ್ತುವುದು ಕನಸು ದೈರ್ಯದಿಂದ ನುಗ್ಗಿದರೆ ಕನಸು ಕೂಡ ನನಸು ಸೃಷ್ಟಿಸುವುದು ಮಾಯಲೋಕನಂಬಿದರೆ ಸೇರಿಸುವುದು ಪರಲೋಕ ಎಚ್ಚರ ತಪ್ಪಿದರೆ  ಮನಸು ಎಂಬ ಮಾಯೆ ದೇವಾ ಕೊಟ್ಟ ಭಿಕ್ಷೆ ಮನುಜ ನೀನು ಸರಿ ಉಪಯೋಗಿಸಿದರೆ ರಕ್ಷೆ ಮೈ ಮರೆತರೆ ಖಂಡಿತ ನಿನಗೆ ಶಿಕ್ಷೆ ಹಾರುವುದು ಕುಣಿಯುವುದು ಮರೆತು ಕಕ್ಷೆ ಮನಸ್ಸು ಎಂಬುದು ಮುದ್ದಾದ ಕರ್ಮ ದೇವರಿಗೆ ಗೋತ್ತು ಏನದರ ಮರ್ಮ  ಯಾರಿಗೂ ತಿಳಿಯದ ಸೊಬಗು ಆರೋತವನೆ ಬಲ್ಲ ಅದರ ಮೆರಗು **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ನನ್ನ ಉಸಿರು

Image
  ಸವಿ ನೆನಪೇ ನನ್ನ ಉಸಿರು ಪ್ರೀತಿಯೇ ಅದರ ಹೆಸರು ಬಿಟ್ಟು ದೊರಗೋ ಮುನ್ನ ಒಲವಲ್ಲಿ ನಾ ಬೆಂದೆ ಚಿನ್ನ ಕಣ್ಣೀರು ಮನದ ಹನಿ ಮಿಡಿದ ಒಲವ ಕಂಬನಿ ಬಿದ್ದನಂತಾಯಿತು ಇಬ್ಬನಿ ಮಾತಾನೊಂದು ಪ್ರತಿ ಧ್ವನಿ ಮುಗಿಯದ ಒಲವ ಬೇಗೆ ನಾನು ಬಂದು ನಿನ ತಾಗೆ ಬಂಧನ ಸವಿಯಾಗೆ ತಬ್ಬಿತು ನನ್ನ ಇತವಾಗೆ ಒಲವೆಲ್ಲಾ ಬರಡಾಯ್ತು ಬದುಕು ಬರಿದಾಯ್ತು ಕನಸೆಲ್ಲ ಚೂರಾಯ್ತು ಕಣ್ಣೀರು ನಡಿಯಾಯ್ತು ನಿ ನನ್ನವಳಲ್ಲ ಎಂದು ತಿಳಿದಾಯ್ತು ಜೀವನವೇ ಸಾಕಾಯ್ತು ಉಸಿರ ನಿನ್ನ ಹೆಸರು ಮಾಸಿ ಮಾಡಿದೆ ಹೃದಯ ಗಾಸಿ ******†**ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಸಣದ ಹೂವು

Image
  ಮಸಣದಲ್ಲಿ ಅರಳಿದ ಹೂವೆ ದಿನ ನೋಡುವುದು ಬರಿ ನೋವೇ ಹಾಸಿ ಹೋದ್ದಿರುವ ಹೂವಿನ ರಾಶಿ ಬಾಡಿ ಹೋಗುವುದು ಶಿವನೇ ಕಾಶಿ ಆರು ಮೂರಡಿಯ ಗುಂಡಿಯಲ್ಲಿ ಬರಿದಾಗುವ ಮೂಳೆ ಮಾಂಸಗಳು ಬಿಲ್ವಾ ಪತ್ರೆ ವಿಭೂತಿಯಲಿ ಪೂಜೆಗೈವರು ಹೋರಟನೆಂದು ಕಣ್ಣೀರು ಸುರಿಸವರು ಕಾಣನೆಂದು ವಿಧಿಯ ಕೈ ಗೊಂಬೆ ಮನುಜ ಹೊತ್ತು ಹೋಗಲ್ಲಿಲ್ಲ ಕಣಜ ಬಿಟ್ಟೋಗೋ ಬಾಳಿಗೆ ತುಂಬಿಟ್ಟೆ ಜೋಳಿಗೆ ಸೇರುವರು ಜನ ನಿನಗೆ ಕಳಿಸಲು ಪಾಪ ಪುಣ್ಯದ ಹಾದಿಗೆ ಹುಟ್ಟುವಾಗ ಅಮ್ಮ ಅತ್ತಳು ಸಾಯುವಾಗ ಸಂಸಾರ ಅತ್ತಿತ್ತು ಮದ್ಯೆ ನಿ ಮಾಡಿದ ಹೆಸರು ಕಾದಿದೆ ಇರುವಾಗ ನಿನ್ನ ಉಸಿರು ಮಸಣದಲಿ ಅರಳಿದೆ ಹೂವೆ ನಿನ ಮೇಲೆ ಎಸೆದ ಸೀರೆ ಸಿಂಗರಿಸಿದಂತಿದೆ ಸೌಂದರ್ಯದ  ನೀರೇ ಬಾಡುವ ಮುನ್ನ ಒಮ್ಮೆ ಮೊಗವ ತೊರೆ ಕಟ್ಟೀಹ ಆ ಘೋರಿ ಹೇಳಿದೆ ನಿನ್ನ ಹೆಸರು ಸಾರಿ ಬದುಕು ಮೂರೇ ದಿವಸ ಬಾಳು ನಿ ಸರಿ ದಾರೀಲಿ ಮನುಸ ನಿನ್ನ ಹೆಸರು ಹೇಳಲಿ ನಿನ್ನ ಉಪಕಾರದ ಕೆಲಸ  **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಕಾಗದದ ದೋಣಿ

Image
ನಾವಿಕನಿಲ್ಲದ ಕಾಗದದ ದೋಣಿಯೇ ಎಲ್ಲಿಗೆ ನಿನ್ನ ಪಯಣ ನೀರಿನ ಅಲೆಗಳ ಹೊಡೆತಕೆ ಆಲೂಗಾಡಿದೆ ನಿನ್ನ ಜೀವನ ಗಾಳಿಯು ಬಿಸಿದೆ ನಿನ್ನನ್ನು ನೂಕಿದೆ ಸೇರುವೆಯಾ ನಿ ತೀರವ ಒಲವಿಂದ ನಾ ಬಿಟ್ಟ ಕಾಗದದ ದೋಣಿಯೇ ಒರುವೆಯಾ ಪ್ರೀತಿ ಬಾರವ ಮುಂದೆ ಮುಂದೆ ಸಾಗಿ ನೀರಲ್ಲಿ ಮುಳುಗಿ ನೀನೇಕೆ ಸೋತೆ ಮನದ ಆಸೆಯ ಅರಿಯದೆ ನನ್ನನ್ನು ನಾ ಮರೆತೇ ನಿನ್ನಲಿ ನಲಿವನ್ನು ಕಾಣದೆ ಕನಸ್ಸಲ್ಲಿ ನಾ ಬೇರೆತೆ  ತಣ್ಣನೆ ನೀರಿಗೆ ನಲುಗಿದೆ ನಿನ್ನ ಮೈ ಕೊಟ್ಟೋದೇ ನಿ ನನಗೆ ಕೈ ದಡ ಸೇರುವ ನನ್ನಯ ಕನಸಿಗೆ ನಿ ಬಿದ್ದೆ ಪ್ರೀತಿಯ ನೀರಿನ ಸುಳಿಗೆ ಬಣ್ಣದ ಜಾತ್ರೆಯ ಕಾಗದದ ದೋಣಿಯೇ ನನ್ನಾಸೆ ಒಲವಿನ ಪ್ರೀತಿಯ ಏಣಿಯೇ ತಿಳಿಸದೇ ನಿ ಹೊರಟೆ ಮುಳುಗಿ ನನ ಮನವು ನಿನ ನೋಡಿ ಕರಗಿ  ಅ ಊರ ದಡ ದೂರ ನಿ ಸೇರಿದೆ ನೋವಿನ ತೀರ ನಿ ಇಲ್ಲದ ನನಗೆ ಮನಸೇಕೋ ಬಲು ಬಾರ ಮತ್ತೊಮ್ಮೆ ಬಿಡುವೆನ್ನು ದೋಣಿಯೇ ನಿನ್ನ ಸೇರು ನಿ ದಡವ ಸಾಯುವ ಮುನ್ನ ನಾವಿಕನಿಲ್ಲದ ಕಾಗದದ ದೋಣಿಯೇ ಎಲ್ಲಿಗೆ ನಿನ್ನ ಪಯಣ ನೀರಿನ ಅಲೆಗಳ ಹೊಡೆತಕೆ ಆಲೂಗಾಡಿದೆ ನಿನ್ನ ಜೀವನ ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮರೆಯಾಗದ ಮಳೆ

Image
ಮೋಡಗಳು ಚದುರಿ ಮಿಂಚೊನ್ದು ಮಿಂಚಿ ಸಿಡಿಲೊಂದು ಸಿಡಿದು ಸುರಿವ ಜಡಿ ಮಳೆಗೆ ನಿರೊಂದು ನದಿಯಂತೆ ಹರಿಯುತ್ತಿತ್ತು......... ತುಂಬಿದ ಈ ಮಳೆಗೆ ಒಲದಲ್ಲಿನ ಬೇಳೆ  ಅಡಿಕೆಯ ಸಸಿಯು ತೆಂಗಿನ ಗಿಡವು ಅಳುತಾಲ್ಲಿತ್ತು ನಿಂತ ನಿರೊಂದು ಮುಂದೆ ಕದಲದೆ ನಿಂತಲ್ಲೇ ನಿಂತು ಒಲವೆಲ್ಲಾ ಕೆಂಪಾಗಿ ಕಾಣುತಿತ್ತು ರೈತನ ಹೃದಯ ಒತ್ತಿ ಹುರಿಯುತಿತ್ತು ಹಿಂಗಾರು ಮಳೆ ನೀರು ಒಲದಲ್ಲಿ ಇಂಗಿ ಬೆಳೆದ ಬೆಳೆಯು ಬಾಡಿ ಹೊಯ್ತು ನೋವಿನ ಕಥೆಯ ಹೇಳಿ ಹೋಯ್ತು ಬಾಡಿದ ಬೆಳೆಗೆ ಸರ್ಕಾರದಿಂದ  ಬೇಳೆ ಹಾನಿ ಹಣವು ಬಂತು ರೈತನ ಕೈ ಸೇರೋ ಒಳಗೆ ದಿಕ್ಕೇಟ್ಟ ರೈತನ ಹೆಣವೇ ಬಿತ್ತು ಬಂದ ಹಣ ಅವನ ತಿಥಿಯ ಬಾಡೂಟಕೆ ಸಾಲದಾಯ್ತು ಯಾರಿಗೆ ಬೇಕು ಈ ರೈತನ ಕಸುಬು ಮನೆ ಮಂದಿಯೆಲ್ಲಾ ಸುಡುವ ನಸೀಬು ಗೋಳಿಂದ ಊರು ಊರೇ ನಲುಗುತ್ತಿತ್ತು ಮತ್ತೆ ಮುಂಗಾರು ಮಳೆಗೆ ಕಾಯುತಿತ್ತು  *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ಒಲವ ಹೂವು

Image
ಒಲವ ಹೂವಾದೆ ನೀನು ಇರುಳ ಬೆಳಕಾದೆ ನೀನು ನನ್ನ ಕನಾಸಾಗುವೆಯೇನು ಮಿಡಿದ ಹೃದಯಕೆ ನೀನು ಹೂವೊಂದು ಸೂತಿತು ನಿನ ಮುಡಿಗೆ ಸೇರಿ ಕನಸೊಂದು ನನಸಾಯಿತು ಪ್ರೀತಿ ನಗುವ ಬೀರಿ ಕಣ್ಣಿನಲ್ಲಿ ಕಾಡುವ ಸಂಚು ಪ್ರೀತಿಯ ಬೇಡುವ ವಂಚು ನನ್ನಲ್ಲಿ ಇಡಿಸಿದೆ ಹುಚ್ಚು ನನ್ನವಲವೇ ನಿ ರಚ್ಚು ತೆರೆದ ಹೃದಯದ ಮಾತು ಒಲವ ಬಿಚ್ಚಿ ಹೇಳಿತ್ತು ನಿನಾಗಾಗಿ ನಾನು ಓ ನನ್ನ ಪ್ರೀತಿಯ ಜೇನು ನಸುಕಾದ ಮನಕೆ ಪೀತಿಯ ಬಯಕೆ ಒಲವಿನ ಕಾಣಿಕೆ ನನ್ನ ಉಸಿರಿಗೆ ಕುಣಿಕೆ  ಒಲವ ಹೂವಾದೆ ನೀನು ಇರುಳ ಬೆಳಕಾದೆ ನೀನು ನನ್ನ ಕನಾಸಾಗುವೆಯೇನು ಮಿಡಿದ ಹೃದಯಕೆ ನೀನು ************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನೂಕು ಮಾಡೆಲ್ ಗಾಡಿ

Image
ನೂಕು ಮಾಡೆಲ್ ಗಾಡಿ ಇದು ನೋಕು ಮಾರಾಯ ರೋಡಲ್ಲಿ ಒಬ್ಬಳು ಹುಡುಗೀ ಬಂದಳು ನೋಡು ತಮ್ಮಯ್ಯ ತೆಳಗೆ ಬೆಳಗ್ಗೆ ಚೂಡಿಹಾಕೊಂಡ್ ಮಿಂಚ್ತಾವಳೇ ನೋಡಯ್ಯ ಒಮ್ಮೆ ನೋಡಿ ನಕ್ಕರೆ ಅವಳು ಕಳೆದೋದೆ ನಾನ್ನಯ ಎಷ್ಟು ತಳ್ಳಿದ್ರು ಗಾಡಿ ಏಕೋ ಸ್ಟಾರ್ಟ್ ಹಾಗ್ತಾಇಲ್ಲಯ್ಯ ಕ್ಲಚ್ ಹೊತ್ತಿ ಗೇರು ಹೊಡೆದು ಎಕ್ಸಾಸಲಾಟರ್ ಕೊಡಯ್ಯ್ ಹೀಟಾದ ಮೇಲೆ ಗಾಡಿ ಸ್ಟಾರ್ಟ್ ಆಯ್ತು ಕಾಣ್ಣಯ್ಯ  ಫಾಲೋ ಮಾಡುಹುಡುಗಿಯನ್ನ ಸಿಕ್ಕರೆ ಅವಳು ತುಂಬಾ ಚೆನ್ನಾ ಕೂತು ಕುಡಿಯೋಣಕಾಫಿಯನ್ನ ಕೇಳು ಒಮ್ಮೆ ಬರ್ತಾಳೆನ ಹುಡುಗಿ ತಿರುಗಿ ಅಂದ್ಲು ಹಾಯ್ ಮುಂದೆ ಪೊಲೀಸ್ ಮಾಮ ಕೈಯ  ನಿಲ್ಲಿಸು ನಿನ್ನ ಗಾಡಿಯನ್ನ ತೇಗಿ ಗಾಡಿ ಡಾಕ್ಯುಮೆಂಟ್ಸ್ ನಾ ಡಾಕ್ಯುಮೆಂಟ್ಸ್ ಎಲ್ಲಾ ಇತ್ತು ಹೋಗೆ ತಪಾಸಣೆ ಮುಗಿದೋಗಿತ್ತು ಕಟ್ಟು ಸಾವಿರದೈನೂರು ಫೈನ್   ಬಿಲ್ಲಲಿ ಹಾಕು ಒಂದೂ ಸೈನ್  ಕಾಡಿ ಬೇಡಿದ ಮೇಲೆ ಪೊಲೀಸ್  ಮಾಮ ಕೇಳದ ಇನ್ನೂರು ಜೇಬನಲಿಟ್ಟೆ ಒಂದೂನೂರು  ಬೈಕ್ ಅತ್ತಿ ಕಾಲು ಕಿತ್ತಿ ಹೊರಟೇ ಅಲ್ಲಿಂದ  ನೋಡುದ್ವಿ ಹುಡುಗಿ ರೋಡಲ್ಲಿ ಕಾಣಾಲಿಲ್ಲ ಬೆಡಗಿ ನೋಕು ಮಾಡೆಲ್ ಗಾಡಿ ಇದು ಏರಿ ನೋಡಯ್ಯ್  ಜೀವನದಲ್ಲಿ ಖುಷಿನೇ ಇಲ್ಲ ಯಾಕೀಗೆ ಕಣ್ಣಯ್ಯ ಕೊರೊನ ಬಂತು ಜೀವನ ನುಂಗುತ್ತು ಅದ್ಕಕೆ ನೋಡಯ್ಯ  ನೂಕು ಮಾಡೆಲ್ ಗಾಡಿ ಇದು ಏರಿ ನೋಡಯ್ಯ  ಪೆಟ್ರೋಲ್ ಬೆಲೆ ಗಗನಕೊಯ್ತು ಮೋದಿ ಕೆಳ್ಳಯ್ಯ  ಮುಂದೆ ಇಗೆ ಆದ್ರೆ ಎಗೋ ತಮ್ಮಯ್ಯ ಹುಟ್ಸಿದ್ದ ದೇವರ...

ಹುಣ್ಣಿಮೆ ಚಂದ್ರ

Image
ನಾ ಕಂಡೆ ಹುಣ್ಣಿಮೆ ಚಂದ್ರ ಸೌರಮಂಡಲದಿ ಕಾಣುವ ರಂದ್ರ ಮೈಯ ತುಂಬ ಬೆಳಕು ನೋಡಲು ಮನವೆಲ್ಲ ಕಲಕು ತಂಪಾದ ಸಂಜೆ ತಣ್ಣನೆ ಗಾಳಿ ಮಾರಾಗಿಡಗಳ ಮೈನವೀರೇಳಿ ಎಲೆಗಳ ಶಬ್ದ ಕಾಡೆಲ್ಲಾ ನಿಶಬ್ದ ಬೇಲಿಯ ಸಾಲು ಹಕ್ಕಿ ಅಮಲು ನಡೆವಾಗ ನಾನು ಬಿದ್ದಂಗೆ ಬಾನು ನೋಡಿದೆ ಕಣ್ಣೆತ್ತಿ ಚಂದ್ರನ ನನ್ನಿಂದೆ ಬರುವ ಅವನ ನಾ ನಿಂತಲ್ಲಿ ಅವ ನಿಂತ ಕುಂತಾಲ್ಲಿಯೂ ನಿಂತ ಹೊರಡಲು ಬರುವ ನೋಡುತಿಹಾ ಜಗವ ನನ್ನಯ ಮನವ ಕಲಕಿದ ತನುವ  ನಾ ಮರೆಯೇ ಬೆಳದಿಂಗಳ ನಗುವ ನೀನೇನೆ ಮುಸಕಾಗದ ಗೆಲುವ  ನಡು ರಾತ್ರಿಯಲಿ ನಾ ಕಾಡಲ್ಲಿ ಗೂಬೆಯ ಕೂಗು ಕೇಳಿತು ನನಗಲ್ಲಿ ಭಯ ಬಿದ್ದೆ ನಾನು ನೆನೆದೆನು ದೇವರನು ಕೊಡು ನಿ ದೇವ ನನಗೆ ಧೈರ್ಯವ ಹುಣ್ಣಿಮೆ ಬೆಳಕಲ್ಲಿ ಚಂದ್ರನ ನಗುವಲ್ಲಿ ಮಿನುಗುತಿಹಾ ನಕ್ಷತ್ರ ಅಗಸದಲ್ಲಿ ನೋಡುತ ನಿಂತೆ ಮರೆತು ಚಿಂತೆ ತಾರೆಗಳ ಸಂಭ್ರಮ ಉಲ್ಕೆಗಳ ಅನುಪಮ ದೇವಾ ನಿನ ಸೃಷ್ಟಿ ನಿ ಇಡಿದ ಮುಷ್ಟಿ ಅದದ್ಬುತವೇ ನೋಡು ಬೆಳದಿಂಗಳ ಕಾಡು ಹಕ್ಕಿಗಳ ಕಲರವ ಚುಕ್ಕಿಗಳ ಸಾವ ಕಣ್ಮುಂದೆ ಬಂತು ನಿದ್ದೆಯ ತಂತು **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಸಿನಿಮಾ ಹುಡುಗಿ

Image
  ಸಿನಿಮಾ ಎಂಬ ಮಜದ ಸಂತೆ ನೋಡಲು ಸಾಲಿನಲಿ ಕಾದು ನಿಂತೆ ಹೆಸರು ಸಲಗ ಬಂದಿತ್ತು ನನ್ನ ಬಳಗ ರಕ್ತ ಹರಿಸುವ ಹರಿತ ಮಚ್ಚುಗಳ ಕಾಳಗ ಸಿನಿಮಾ ತುಂಬಾ ಶಿವಣ್ಣನ ಕದರೂ ದುನಿಯಾ ವಿಜಿ ಎಂಬ ಫಿಗರ್ ನೋಡುತ್ತಾಲಿದ್ದೆ ಪುಡಿ ರೌಡಿಗಳ ದರ್ಬಾರು ಪೊಲೀಸ್ ಹಾಗಿ ಡಾಲಿ ಕಾರ್ಬಾರು ಹಾಗೆ ಒಮ್ಮೆ ಬಂದ್ಲು ಹುಡುಗಿ ಮನಸು ಕಾಡೋ ಒಳ್ಳೆ ಬೆಡಗಿ ನಗುವ ತುಂಬಾ ಐಶ್ವರಾಯ ರೈ ಮಾತು ಎಲ್ಲಾ ಮಿಡಿವ ಲಕ್ಷ್ಮಿ ರೈ ಕಣ್ಣ ತುಂಬಾ ಅವಳ ಬಿಂಬ ನೋಡಿ ಸೋತೆ ಚೆಲುವ ಸೋಬಗ ಮನಸ್ಸು ಒಮ್ಮೆ ಲವ್ ಯು ಅಂತೂ ನಕ್ಕು ಬೀಟ್ಟಳು ನೋಡಿ ಕುಂತು ಸಿನಿಮಾ ಮುಗಿದ ಮೇಲೆ ಅರಟೆ ಅವಳ ಹಿಂದೆ ನಾನು ಹೊರಟೆ ಎಷ್ಟು ಸುತ್ತಿದರು  ಸಿಕ್ಕಲ್ಲಿಲ ಏಕೆ ನನ್ನ ನೋಡಿ ನಕ್ಕಳ್ಳಾಲ ಮತ್ತೆವೊಮ್ಮೆ ದಾರಿಯಲ್ಲಿ ಸಿಕ್ಕಳ್ಳು ನೋಡಿ ಒಮ್ಮೆ ಹಾಗೆ ನಕ್ಕಳ್ಳು ಈಗ ಅವಳಿಗೆ ಮೂರು ಮಕ್ಕಳು  ಕಣ್ಣನಲ್ಲಿ ಕಂಬನಿ ಬಿದ್ದತಂತಾಯಾತು ಮಳೆ ಹನಿ ಗೆಳೆಯರಿಗೆ ನನ್ನ ವಿಷಯ ನಗೆ ಹನಿ  ************ರಚನೆ ******** ಡಾ. ಚಂದಶೇಖರ್. ಸಿ. ಹೆಚ್

ಕರೀಮುಗಿಲು ಗಿರಿ ನವಿಲು

Image
ದೂರದ ಗೂಡಲಿ ಕರೀಮುಗಿಲು ಬಂಡೇ  ನಿನ್ನಯ ಒಲವಲಿ ಗಿರಿನವಿಲು ಕಂಡೆ ಪ್ರೀತಿಯ ಕನಸಿಗೆ ಗಿರಿ ನವಿಲೇ ಒಲವು ಸುರಿವ ಮಳೆಗೆ ಕರೀಮುಗಿಲು ಜಲವು ಆಗಸದಿ ಮಿಂಚೊನ್ದು ಬಂದು ಕರೀಮುಗಿಲ ನಡುವೆ ಬರಸಿಡಿಲು ಸಿಡಿದು ಬದುಕಿನ ಬೆವರನು ಮಳೆಯಲ್ಲಿ ತೋಯ್ದು ಸುಡುಗಾಡ ಸಂತೆಯಲ್ಲಿ ಗಿರಿ ನವಿಲು ಕುಣಿದು ಹಾಡಿದೆ ಹಾಡೋoದು ಕೇಳುವಿರಿ ನೀವಿಂದು ಕರೀಮುಗಿಲು ಎಲ್ಲೊ ಗಿರಿನವಿಲು ಎಲ್ಲೊ  ಬಣ್ಣಗಳ ಜಾತ್ರೆ ನಕ್ಷತ್ರಗಳ ಯಾತ್ರೆ ಮುಗಿಲ್ಲಲ್ಲಿ ಸಂತೆ ನೋಡುತ ನಿಂತೆ ಸೂರ್ಯನ ಮುಳುಗು ಚಂದ್ರನ ಬೆಳಗು  ನಕ್ಷತ್ರ ನಗುವಾಗ ಉಲ್ಕೆಯು ಬೀಳುವಾಗ ಸ್ವರ್ಗವ ಕಂಡೆ ಕೂತು ನಮ್ಮೂರ ಬಂಡೇ ಜಾತ್ರೆಯ ಇಬ್ಬನಿ ಮಿಡಿದ ಕಂಬನಿ ತುಂತುರು ಮಳೆ ಹನಿ ಹೊಸ ಬೆಳಕಿನ ಸವಿ ಹನಿ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮೂರಬಟ್ಟೆ

Image
ಬದುಕುಎಂಬುದು ಮೂರಬಟ್ಟೆ ನಿ ನನಗೆ ಪ್ರೀತಿಯಲಿ ಕೈ ಕೊಟ್ಟೆ  ನಿನ್ನ ನೆನಪಲಿ ನಾ ಕೆಟ್ಟೆ  ದೇವರೇ ಇಂಥ ವರವನ್ನು ನೀನೇಕೆ ಕೊಟ್ಟೆ ಒಟ್ಟೆಗೆ ಊಟವಿಲ್ಲ ಈಟ್ಟಿಗೆ ಕಾಸಿಲ್ಲ ಮನಸ್ಸು ಎಂಬುದು ಮಸಣವೇ ಎಲ್ಲಾ ನೂರೆಂಟು ನೋವು ಮನತುಂಬಿದೆಯೇಲ್ಲಾ ಕಾಣದ ದೇವರಿಗೆ ಕೈ ಮುಗಿದೆನಲ್ಲ  ಕಂಡ ಕನಸು ಒಂದು ನನಸ್ಸಗಲಿಲ್ಲ ಪ್ರೀತಿ ಮಾಡಿದ ನೆನಪು ಕಾಡಿದೆಯೇಲ್ಲಾ ಮೋಸ ಹೋಗಿ ನಾ ಹುಚ್ಚನಾದೆನಲ್ಲ ನಿನ್ನ ನೆನೆದು ಬದುಕು ಹಾಳಾಯ್ತಲ್ಲ ಯಾರ ಶಾಪವೋ ವಿಧಿ ಆಟವೋ ದೇವರ ನನಗೆ ನೀಡಿದ ಪಾಪವೋ ನಡೆದು ನಡೆದು ದಣಿದೇನು ನಾನು ಹುಡುಕಿದರೂ ಸಿಗಲಿಲ್ಲ ನೀನು ನೋಡಿದರೆ ನೂಕುವರು ನನ್ನ ಬೇಡಿದರೆ ಇಡಲಿಲ್ಲ ಕೊಂಚ ಅನ್ನ ಕೇಳಿದರೆ ನೀಡರು ನೀರು ವಿಧಿ ಆಟ ನೋಡು ಎಷ್ಟು ಕ್ರೂರ ಮನಕಲಕದೆ ನನ್ನ ನೋಡಿ ನೋವಾತಾಳಲರಾದೆ ನಾ ಓಡಿ ಸಮಾಜವೇ ನನ್ನ ಜೀವನದ ಕೇಡಿ ಯಾರಿಗೆ ಏಳಲಿ ನನ್ನ ಬದುಕಿನ ರಾಡಿ ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ರಸ್ತೆ ಗುಂಡಿ

Image
ಹಾಳು ಹಾದಿಯಲಿ ರಸ್ತೆ ಗುಂಡಿ ಸಾಗುತಿದೆ ದಾರಿಯಲಿ ನಮ್ಮ ಜಟಕಾ ಬಂಡೀ ನೋಡಲು ಅ ಮನೆಯ ಪಾಳು ಗುಡಿಯ ಜಪಿಸಿ ಸಾಗಿದೆವು ನಮ್ಮ ವಿಧಿಯ ಕುದುರೆಯು ಹೊತ್ತ ನಮ್ಮ ಬಂಡೀ ನಡುಗುತಾ ಸಾಗಿತು ಮನವ ಇಂಡಿ ಅಕ್ಕಪಕ್ಕದ  ಗೊಟರು ಬಿದ್ದ ಗುಂಡಿ ಗಾಲಿ ಉರುಳುತ ಅತ್ತೀತು ರಸ್ತೆ ಗುಂಡಿ ನನ್ನ ನಲ್ಲೆಯು ನಗುತಾ ಹೇಳಿದಳು ನಮ್ಮೋರ ದಾರಿ  ಗುಂಡಿಗಳ ಸಾವರಿ ಸೇರಲುನಾವು ತುಸು ದೂರ ಹಾಗುವುದು ಮೇಲೆಲ್ಲಾ ನೋವ ಬಾರ ಹಾಳು ಹಾದಿಯಲಿ ಸಾಗಿತು ನಮ್ಮ ಬಂಡೀ ನಾನು ನನ್ನವಳು ತಿಂದೆವು ನಮ್ಮೋರ ತಿಂಡಿ ಬದುಕಿನ ನೋಗದಲಿ ಹೊಸ ಯುಗದಲ್ಲಿ ಗುಂಡಿ ಬಿದ್ದ ಹಾದಿಯಲಿ ಸಾಗಿತು ನಮ್ಮ ಜಟಕಾ ಬಂಡೀ ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ರಾವಣ

Image
ಗುರಿ ಇಟ್ಟ ಬಾಣ ಗುರಿ ತಪ್ಪಿ ನನ್ನಯೆದೆಯಾ ಸೀಳಿರಲು ಆಂಬೊಂದು ಸುಡುಗಾಡಿನಲಿ ಸಿಡಿಯುತಿತ್ತು ರಾವಣನ ಅಟ್ಟಹಾಸ ಮೆರೆಯುತ್ತಿತ್ತು ಯಾರು ಇಟ್ಟರು ಶಾಪ ನೋವಿನ ತಾಪ ಸುಡುತಿತ್ತು ಸೀತೆಯ ಮೊಗವ ನೋಡಿ  ರಾವಣನ ಕನಸ್ಸು ಚಿಗುರುತಿತ್ತು ಎಲವೋ ಸೀತೆ ರಾಮನು ಸತ್ತ ನಿನ್ನ ಮನದ ಆಸೆಯ ಕಿತ್ತ ಒಲವನೆ ಸುಟ್ಟ ರಾವಣನೂ ನಾನೆಂದು ಮನಸ್ಸು ಕುಣಿಯುತಿತ್ತು ಈಗ ಸೀತೆಯ ದುಖ್ಖ ಇರದೇ ರಾಮಾನು ಪಕ್ಕ ಮನಸ್ಸು ಹೊತ್ತಿ ಹುರಿಯುತಿತ್ತು ನನ್ನ ರಾಮನ ಕೊಂದ ಪ್ರೀತಿಯ ತಿಂದ ಬಿಡೆನು ನಾನು ಏನುತಿತ್ತು  ವಿಜಯದಶಮಿಯೊಂದು ದುರ್ಗೆಯ ಬೇಡಿ ವರವನ್ನು ಕಾಡಿ ಪ್ರೀತಿಯ ರಾಮನ ಸುಟ್ಟ ರಾವಣನ ಸಮ್ಮಾರ ನಡೆಯಲಿತ್ತು ಎಳು ತಲೆ ರಾವಣನ ಸುಡುಲು ಬಿಟ್ಟ  ಬಾಣ ತಲೆಯನ್ನೇ ಎತ್ತಿ ಎಸೆಯುತ್ತಿತ್ತು ರಾವಣನ ತಲೆ ಹೋಗಿ ನೆಲಕ್ಕೆ ಬಿದ್ದು  ಸೀತೆಯ ನೋಡಿ ನಗುತಾಲಿತ್ತು ಒ ನನ್ನ ಸೀತೆ ರಾಮನ ಪತಿವ್ರತೆ  ಮತ್ತೆ ಹುಟ್ಟಿಬರುವೆ  ನಿನ್ನ ನಾ ಬಿಡೆನು ಏನುತಲಿತ್ತು ರಾಮ ಇರದ ನೋವು ಸೀತೆಯನು  ಬಳಿ ಬಂದು ಕಾಡುತಿತ್ತು.. **********ರಚನೆ******** ಡಾ. ಚಂದ್ರಶೇಖರ. ಸಿ. ಹೆಚ್

ನೆನಪು

Image
ಕಣ್ಣ ಹನಿಯು ಒಲವ ಕಂಬನಿ ಎಲೆಯ ಮೇಲೆ ಬಿದ್ದ ಇಬ್ಬನಿ ಸುರಿವ ಮಳೆಗೆ ತೊಯುದು ಹರಿವ ನದಿಗೆ ಜಾರಿ ಹೋಯ್ತು ಒಲವ ನೆನಪೊಂದು ಬಿಡದೆ ಕಾಡಿದೆ ನಿನ್ನ ಪ್ರೀತಿಯ ಸಲುಗೆ ಬೇಡಿದೆ ಮನ ಬಿಚ್ಚಿ ಹೇಳು ಒಮ್ಮೆ ಕೇಳುವೆj ನಿನ್ನನೇ ನಾನು ಪ್ರೀತಿ ಮಾಡುವೆ ವಿಧಿಯ ಆಟವು ಏಕೋ ಒಡಿದೆ ಕನಸು ಕಾಣುವ ಮುನ್ನ ಮನವು ನೊಂದಿದೆ ನೂರಾಸೆಯನು ನುಚ್ಚು ಮಾಡಿದೆ ನಿ ಇರದೇ ಹೃದಯ ಬೇಡಿದೆ ನನ್ನ ಒಲವ ಪ್ರೀತಿ ನಲ್ಲೆಯೇ ಮನಸ್ಸಿನ ಅಸೆ ನೀನು ಬಲ್ಲೆಯೇ ನುಡಿವೆ ನಾನು ಒಲವ ನಿಜವಾ ಒಮ್ಮೆ ಕೇಳು ಮನದ ಮಜವ  ಒಲವು ಎಂಬುದು ಬಲು ಮೋಹಕ ಮನಸ್ಸು ಎಂಬುದು ಒಲವ ಗ್ರಾಹಕ ಪ್ರೇಮಿಗಳೆ ನಗುವ ಒಲವ ಪೋಶಕ *******†***ರಚನೆ ******** ಡಾ. ಚಂದ್ರಶೇಖರ  ಸಿ. ಹೆಚ್

ನಡೆವಾಗ ನೀನು

Image
ನಡು ದಾರಿಯಲಿ ನಡೇವಾಗ ನೀನು ಪ್ರೀತಿಯಲಿ ನುಡಿದೆನು ನಾನು ಓ ನನ್ನ ಚಿನ್ನ ಪ್ರೀತಿಯಲಿ ರನ್ನ ತಿರುಗಿ ನೋಡು ಒಮ್ಮೆ ನನ್ನ ಒರೆಗಣ್ಣಲಿ ನೋಡಿ  ಕಣ್ಣಸನ್ನೆಯ ಮಾಡಿ ಮನಸಿನ ಕಾದ ತೀಡಿ ನೀ ನಡೆದೇ ಮುಂದೆ ಮತ್ತೆ ನೋಡದೆ ಇಂದೆ ನಿನ ನೋಟ ಕಾಡಿತು  ಒಲವೊಂದು ಮೂಡಿತು ಪ್ರೀತಿಯನು ಬೇಡಿತು ಹೃದಯದಿ ಹಾಡೊಂದು ಹಾಡಿತು ಓ ನನ್ನ ಒಲವೇ ಪ್ರೀತಿಯು ಇತವೇ ನಿನ ಮಾತು ಬಂಗಾರ ಚಂದ್ರನ ಅಲಂಕಾರ ಕಣ್ಣಿನಾ ನೋಟವೇ ಮಿಂಚು ನಗುವೊಂದು ಮೋಹಕ ಸಂಚು ಪ್ರೀತಿಯ ಪಡೆಯುವ ವಂಚೂ  ಕೆನ್ನೆಯು ಕೆಂಪು ಮನಸ್ಸಿಗೆ ತಂಪು  ಕುಡಿ ನೋಟವೇ ಸೊಬಗು ಸೀರೆಯು ಬಲು ಮೆರಗು ನಿನ್ನ ಅಂದಂಕೆ ತಂದ ಬೆರಗು ನಿ ಉಟ್ಟ ಸೀರೆಯ ಸೆರಗು ನಡು ದಾರಿಯಲಿ ನಡೆವಗಾ ನೀನು ಪ್ರೀತಿಯಲಿ ನುಡಿದೆನು ನಾನು ಓ ನನ್ನ ಚಿನ್ನ ಪ್ರೀತಿಯಲಿ ರನ್ನ ತಿರುಗಿ ನೋಡು ಒಮ್ಮೆ ನನ್ನ *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಆಣೆಯಲಿ ನಿನ್ನ ಹೆಸರು ಗೀಚಿದೆ

Image
  ನನ್ನ ವಿಧಿ ನನ್ನ ಹೆಸರ ಮೇಲಿದೆ  ನನ್ನ ಆಣೆಯ ತುಂಬಾ ನಿನ್ನ ಹೆಸರು ಗೀಚಿದೆ ನಿನ್ನ ಮನಸ್ಸಿನಲ್ಲಿ  ಏನೋ ಇದೇ  ನೀನು ಬರೆದೆನೆ ನೋವು ತುಂಬಿದೆ ಒಮ್ಮೆ ನೀನು ಹಾಯ್ ಎಂದರೆ ನಾನು ಮನಸು ಹಾಗೆ ಕಣ್ಮರೆ ಬಾರೆ ನೀನು ಓ ನಲ್ಲೆಯೇ ಪ್ರೀತಿಯಿಂದ ನನ್ನ ಗೆಲ್ಲೆಯೇ ಹೇಳಿ ಹೋಗು ಒಮ್ಮೆ ಪ್ರೀತಿಯ ಊರು ತುಂಬಾ ನೋಡು ನಿನ್ನ ಜಾತ್ರೆಯ ಕಾಡಿ ಏಕೆ ನನ್ನ ಕೊಲ್ಲುವೆ ಬಂದು ನಿನ್ನ ಮುಂದೆ ನಿಲ್ಲುವೆ ಗಾಳಿಯಲಿ ಹಾರಿದ ಹಕ್ಕಿಯೇ ಸುಡುಗಾಡಿನಲ್ಲಿ ಸೂಟ್ಟ ಚುಕ್ಕಿಯೇ ಪ್ರೀತಿ ಒಲವು ಮತ್ತೆ ಬಂದರೆ ನನ್ನ ಒಲವು ನೀನು ನಕ್ಕರೆ ಎದೆಯ ತುಂಬಾ ನಿನ್ನ ಅಕ್ಕರೆ ಒಮ್ಮೆ ಹೇಳು ನಿನ್ನ ಪ್ರೀತಿಯ ಮಾಡುವೆ ನಾನು ಪೂಜೆಯ ಪ್ರೀತಿಗಾಗಿ ಪ್ರೀತಿ ಕಣ್ಮರೆ ಕಣ್ಣ ಬಿಂಬದಲಿ ನಿನ್ನ ಸೆರೆ ನೀನು ಒಮ್ಮೆ ಲವ್ ಯು ಅಂದರೆ  ನಾನು ನಿನ್ನ ಕೈಸೇರೇ  ಕೊಡುವೆ ನಾನು ನನ್ನ ಪ್ರೀತಿ ಸಕ್ಕರೆ ನನ್ನ ವಿಧಿ ನನ್ನ ಹೆಸರ ಮೇಲಿದೆ  ನನ್ನ ಆಣೆಯ ತುಂಬಾ ನಿನ್ನ ಹೆಸರು ಗೀಚಿದೆ  ನೀನು ಬರೆದೆನೆ ನೋವು ತುಂಬಿದೆ ಒಮ್ಮೆ ನೀನು ಹಾಯ್ ಎಂದರೆ  ನನ್ನ ಮನಸು ಹಾಗೆ ಕಣ್ಮರೆ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಓ ಮಳೆಯೇ

Image
ಓ ಮಳೆಯೇ ನಿನ್ನ ಈ ರುದ್ರ ನರ್ತನ ನಾನೇಲೋಕೊ ತಂತು ಕಂಪನ ಒಮ್ಮೆ ಹೇಳು ನಾನು ಬಂದರೆ ಭೂಮಿ ತಾಯಿ ಹುಡುವಳು ಹಸಿರೇ  ಯಾಕಾದೆ ಓ ನಿ ಮೌನ   ನೀ ನನ್ನ ಹೃದಯದ ಕವನ ಮಾತಿಲ್ಲದ ಒಲವು ಚೆಂದ ನಿನ್ನ ನುಡಿಯು ಇನ್ನು ಅಂದ ಹಸಿರುಟ್ಟ ನಲ್ಮೆಯ ಒಲವೇ ನೀ ನೆಡೆದ ದಾರಿಯು ಗೆಲುವೇ ನಸುನಕ್ಕ ಇಬ್ಬನಿ ಹೇಳಿತು  ನನ್ನಗೆದ್ದ ಸುಂದರ ಚೆಲುವೆ ಮೈಮೇಲೆ ಜಾರಿದ ಹನಿಯೇ ಧರೆಗಿಳಿದ ನೋವಿನ ಕಂಬನಿಯೇ ನೀ ಬಿದ್ದ ನೆಲವು ತಂಪು ನೀ ಹರಿವ ಜಲವೇ ನಸುಗೇಮ್ಪು ಮೈ ಕುಣಿಸಿ ಮಿಸುಕದೆ ನೀ ಹರಿವೆ ಧರೆಗಿಳಿದ ವರುಣನ ವರವೇ ನೀ ಇದ್ದರೆ ಪ್ರಕೃತಿ ಹಸಿರು ಗಿಡ ಮರವು ಹೇಳಿದೆ ನಿನ್ನ ಹೆಸರು ಋತುಗಳ ಮಿಡಿವ ಚಲನ  ಬಣ್ಣದ ಬದುಕಿನಾ ನಯನ ಕಾಲದ ನಡುಗೆಯ ಸಲುಗೆ ತಂದಿದೆ ಬದುಕಿಗೆ ಹೊಸ ಬೆಸುಗೆ ಓ ಮಳೆಯೇ ನಿನ್ನ ಈ ರುದ್ರ ನರ್ತನ ಭೂಮಿಯಲ್ಲಿ ತಂತು ಕಂಪನ **********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಕಾವಲು ನಾನಾದೆ

Image
ಕಾವಲು ನಾನಾದೆ  ಕನಸಿನ ಊರಿಗೆ ಕಾವಲು ನಾನಾದೆ ಹೃದಯದ ಬೀದಿಗೆ ತೇರು ನಿನಾದೆ ಒಲವಿನ ಜಾತ್ರೆಗೆ ನಾನು ಬೇರಗಾದೆ ನಿನ್ನಯ ನಗುವಿಗೆ ಸೋತು ಮರುಳಾದೆ ಮನಸಿನ ಆಸೆಗೆ ಕನ್ನಡಿಯೇ ಮುನ್ನುಡಿಯು ಬಳಿ ಬಂದ ನೋವಿಗೆ ಈ ಬೆಸುಗೆಯೂ ತೀರದ ಬಯಕೆಗೆ ಕನಸೊಂದೆ ದಾರಿ ನನ್ನಾಸೆ ಹೂವು ಕಮರಿದೆ ಪ್ರತಿ ಬಾರಿ  ಕಾಣದ ಹಾದಿಗೆ ಈ ಕವಲು ದಾರಿ ನಡೆವಾಗ ನಡುಗಿದೆ ಪೀತಿಯು ಸೋರಿ ಸೇರಲು ನಾವು ದೂರದ ತೀರ ಮನಸಿನ ಕಥೆಯೊಂದು ಬಾರ ನಸುನಗುವ ನೀನೇಕೆ ಬಳಿ ಬಂದೆ ನನ್ನಲಿ ಒಲವನ್ನು ಹೊತ್ತು ತಂದೆ ಒಲವಲ್ಲಿ ಇತವಿಲ್ಲ ಮನಸ್ಸಲಿ ಸೊಬಗಿಲ್ಲ ನೂರೆಂಟು ಕನಸು ಕಣ್ಣಲಿ ಕರಗಿತ್ತಲ್ಲ ಚೂರಾದ ಮಾತು ಮರೆತೋಯುತು ಸೋತು ಕಣ್ಣಿಗೆ ಕಾಣದ ನೆನಪಾಯ್ತು ಮುತ್ತು ನೇಪಾವೊಂದೇ ದಾರಿ ಬೀಳುವ ಕನಸಿಗೆ ಒಮ್ಮೆ ನೀನು ಹೇಳು ಒಲವ ಮನಸಿಗೆ  ಕನಸಿನ ಊರಿಗೆ ಕಾವಲು ನಾನಾದೆ ಹೃದಯದ ಬೀದಿಗೆ ತೇರು ನಿನಾದೆ ಒಲವಿನ ಜಾತ್ರೆಗೆ ನಾನು ಬೇರಗಾದೆ ನಿನ್ನಯ ನಗುವಿಗೆ ಸೋತು ಮರುಳಾದೆ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಬಣ್ಣದ ಚಿಟ್ಟೆ

Image
ಬಣ್ಣದ ಚಿಟ್ಟೆ ನನ ಮನದಲಿ ಏಕೋ ನೀನೇ ತುಂಬಿರುವೆ ಕನಸಲಿ ಬಂದು ನನ್ನ ಕಾಡಿರುವೆ ಎದೆಬಡಿತವೇ ನೀನು ನನ ಮನಸಿನ ಮಿಡಿತವೇ ನೀನು ನೀ ಸಿಗದೇ ಇನ್ನು ಪರೀತಪಿಸಿದೆ ನಾನು ನೀ ಮುಗಿಯದ ಮೌನ ನಾ ಬರೆದೇನು ಕವನ   ನಿನ ಸೇರುವ ಮುನ್ನ ಈ ನಲಿವಿನ ಹಾಡು ಒಮ್ಮೆ ನೀ ಕಲೆತು ನೋಡು  ನೀ ಬಣ್ಣದ ಚಿಟ್ಟೆ ನಾ ಮನಸ್ಸನು ಕೊಟ್ಟೆ  ನನ್ನ ಬದುಕನು ಸುಟ್ಟೆ ನೀ ಹೂವಿನ ದುಂಬಿ ಮೋಸವೊದೆ ನಾ ನಿನ್ನ ನಂಬಿ  ಈ ಜೀವನ ಪಯಣ ಬರಿ ನೋವಿನ ದರ್ಪಣ ನೀ ಮನದಲಿ ಬಂದೆ  ನನ ಒಲವನು ಕೊಂದೆ ಬಡಪಾಯಿ ಹೃದಯದಿ ಎದೆ ಬಡಿತವೇ ಹಾಡು ತಿರುಗಿ ಒಮ್ಮೆ ನನ್ನನು ನೋಡು ಏಗಿದೆ ನನ್ನ ಈ ಒಂಟಿ ಪಾಡು ಕನಸಿನ ಹಾದಿಯಲಿ ನೀ ಒಲವನು ಕೊಟ್ಟೆ ಬೇರೆತೊಗೊ ಮುನ್ನ ನೀ ಮನಸ್ಸನ್ನು ಸುಟ್ಟೆ ನೀ ಸುಂದರ ಕಡಲು ನಾ ಅಲೆಗಳ ಮೇಲೆ ತೇಲುವ ದೋಣಿ ಅ ಗಾಳಿಗೆ ಸಿಕ್ಕ ದೋಣಿಯೇ ನೋಡು ಈ ನೀರಿನ ಅಮಲು ನೀ ನನ್ನಯ ಕನಸು ನೀ ಬಂದರೆ ಸೊಗಸು ನೀ ಇರದೇ ಏಕೋ ನನ್ನಲಿ ಮುನಿಸು ನಿನಗಾಗಿ ಈಗ ಸುಡುತಿದೆ ವಯಸು ನೀ ಸುಂದರ ಮೀನು ನಾ ಬಲೇ ಎಣೆಯುವೆ ನಾನು ನೀ ಬಿದ್ದರೆ ನನಗೆ ಕಡಲಮುತ್ತೆ ನೀನು ನೀ ಇರದೇ ಎಗೆ ಇರಲಿ ನಾನು ನೀ ಬಣ್ಣದ ಚಿಟ್ಟೆ ನಾ ಮನಸ್ಸನು ಕೊಟ್ಟೆ  ನನ್ನ ಬದುಕನು ಸುಟ್ಟೆ ನೀ ಹೂವಿನ ದುಂಬಿ ಮೋಸವೊದೆ ನಾ ನಿನ್ನ ನಂಬಿ *********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮೌನದ ಕವಿತೆ

Image
ಮೌನದ ಕವಿತೆ  ಮರೆತರೆ ಹೇಗೆ ಮೌನದ ಕವಿತೆ ಪ್ರೀತಿಯ ಕೊಟ್ಟ ನಲ್ಮೆಯ ವನಿತೆ ಸುಂದರ ನೋಡು ನಿನ್ನಯ ಚೆಲುವು ನಗುತಿದೆ ಏಕೋ ನೋಡಿ ಒಲವು ಕಣ್ಣಿನ ಕಾಡಿಗೆ ತೀಡಿದ ಚಂದ್ರ ನಿನ್ನ ನೋಟಕೆ ಸೂರ್ಯನೇ ಬೆಂದ  ಮುಂಗುರುಳೇಕೋ ಮುದ್ದಾದ ಹಾರ ಕೆನ್ನೆಯು ಹಾಗೆ ಡಿಂಪಲ್ ಸುಂದರ ಆಸೆಯ ಹೊತ್ತು ಬಳಿ ನಾ ಬಂದೆ ನೀನು ನನ್ನಲಿ ನೂರಾಸೆಯ ತಂದೆ ಮೌನದಿ ನೀನು ನುಡಿವೆಯ ರಾಗಕೆ ಮಿಡಿದ ಶ್ರುತಿಯು ಸವಿಮಯ ಒಲವಲಿ ಏಕೋ ಮಿಡಿದಿದೆ ಹೃದಯ ಜೀವನ ತಂದ ಜೇನಿನ ಸವಿಯ ಸುಂದರವಾಲ್ಲವೇ ಈ ಸವಿಗನಸು ಪ್ರೀತಿಯ ಬಾರಕೆ ಮಿಡಿದಿದೆ ಮನಸು ನಿನ್ನಯ ಸಲುಗೆ ಸುಂದರ ಕನಸು ಧನಿಡಿದೆ ಏಕೋ ಈ ವಯಸು ಒಲವು ಒಂದೂ ಬಿಂಬದ ಮಾಯೆ ಮರೆತರು ಹೋಗದ ನಿನ್ನಯ ಛಾಯೆ  ಮರೆತರೆ ಹೇಗೆ ಮೌನದ ಕವಿತೆ ಪ್ರೀತಿಯ ಕೊಟ್ಟ ನಲ್ಮೆಯ ವನಿತೆ ಸುಂದರ ನೋಡು ನಿನ್ನಯ ಚೆಲುವು ನಗುತಿದೆ ಏಕೋ ನೋಡಿ ಒಲವು **********ರಚನೆ ****** ಡಾ ಚಂದ್ರಶೇಖರ. ಸಿ. ಹೆಚ್

ದೂರಾದ ಮನಸು

Image
ದೂರಾದ ಮನಸು  ದೂರವಾಯಿತೇಕೆ ಮನಸು ಕಣ್ಣ ನೀರು ಕಾಣೋಒಳಗೆ ಒಲವು ಕಂಡ ನೋವ ಬೆಸುಗೆ ಮಿಂಚಿ ಹೋಯ್ತು ಬಂದು ಹಾಗೆ ಕನಸಿನಲ್ಲಿ ಕಂಡ ನೆನಪು ಗಾಳಿಯಲ್ಲಿ ತೆಲಿಹೋಯ್ತು ನನ್ನ ಕಟ್ಟಿದ ಪ್ರೀತಿ ಗೋಪುರ ನೀರಿನಲ್ಲಿ ಕೊಚ್ಚಿ ಹೋಯ್ತು ಮನದ ತುಂಬಾ ಬರಿ ಗಾಯ ಹೊತ್ತು ತಂದ ಒಲವೇ ಮಾಯಾ ಓಡಾಲ್ಲಲ್ಲಿ ಕಿತ್ತು ತಿಂತು ಅರಿಯದೇನೆ ಹಾರಿ ಬಂತು ಮನಸ್ಸು ತುಂಬಾ ನಿನದೆ ಧ್ಯಾನ ಮರೆತ ಮಾತು ಯಾಕೋ ಮೌನ ದೂರದ ಊರಿಗೆ ನನ್ನ ಪಯಣ ಸಾಕು ಇನ್ನು ಪ್ರೀತಿ ಕೊಂದ ವರುಣ ಒಲವಲಿ ಏಕೋ ಮನಸು ಬಾರ ನಿನ್ನ ಒಲವು ನನಗೆ ದೂರ ಸಾಕು ಇನ್ನು ನೋವ ಘಳಿಗೆ ಸೋರುತಿಹ ಪ್ರೀತಿ ಮಳಿಗೆ ದೂರವಾಯಿತೇಕೆ ಮನಸು ಕಣ್ಣ ನೀರು ಕಾಣೋಒಳಗೆ ಒಲವು ಕಂಡ ನೋವ ಬೆಸುಗೆ ಮಿಂಚಿ ಹೋಯ್ತು ಬಂದು ಹಾಗೆ ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ನೀ ಬಾರೆ

Image
ನೀ ಬಾರೆ  ಒಲವ ಆಸರೆ ಜೊತೆಗೆ ನೀ ಇರೆ ಬಳಿ ಬಾರೆ ಪ್ರೀತಿಯ ತೆರನು ಕಟ್ಟಿಹೆ ನಿನಗಾಗಿ ಕುರು ಬಾರೆ ಮುದ್ದಾದ ಮೂಗುತಿ ನೀ ಇಟ್ಟ ಹಾಗಿದೆ ಓಹೋ ಬಾರೆ ಲ ಲಾ ಲ ಲಾ ಓಹ್ಹೋ ಓಹೋ ಲ ಲಾ ನಿನ್ನಯ ನೆನಪು ನನ್ನನ್ನು ಕಾಡಿದೆ ಒಮ್ಮೆ ಮೊಗವ ತೋರೆ ಕಣ್ಣಿನ ಕಾಡಿಗೆ ನನ್ನನ್ನು ಕೂಗಿದೆ ನಗುವ ಬೀರೆ ಹ ಹಾ ಹ ಹಾ ಲ ಲಾ ಲ ಲಾ ಏತಕೆ ಸುಮ್ಮನೆ ಹುಸಿಕೋಪ ನನ್ನಲ್ಲಿ ಒಮ್ಮೆ ಬಾರೆ ನೀ ನಕ್ಕ ಕೊಡಲೇ ಮಿಂಚೊನ್ದು ಬಿದ್ದಾನಂಗೆ  ಹೊಡಿ ಬಾರೆ ನೆನಪಲ್ಲಿ ನಿನ್ನನೇ ಕೂತಿಹೆ ಸುಮ್ಮನೆ ಹೃದಯ ತೊರೆ  ಓಹೋ ಓಹೋ ಲ ಲ ಲಾ ಹ ಹ ಹಾ **********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್