ಅಭಿಮಾನಿ
ಕನ್ನಡದ ಕಣ್ಣಮಣಿ
ಅಭಿಮಾನಿಗಳ ಅರಗಿಣಿ
ಒಲವಿನ ಸವಿ ದಣಿ
ಕರುಣೆಯ ಚಿನ್ನದ ಗಣಿ
ಅಭಿಮಾನಿಗಳ ಮನ ಮಿಡಿತ
ಯುವಕರ ಎದೆ ಬಡಿತ
ನಾಟ್ಯದ ಅತಿರಥ
ಕನ್ನಡದ ಮಹಾರಥಾ
ಸ್ನೇಹವೇ ಇವನ ಉಸಿರು
ಪ್ರೀತಿಯೇ ಅವನ ಹೆಸರು
ಮಾಡುವ ಕೆಲಸದಲಿ ಚೇಲವು
ಇವನು ನಂಬಿದ ಗೆಲುವು
ಕನ್ನಡದ ಮುದ್ದಿನ ಕುವರ
ಜನಪ್ರಿತಿ ಗೆದ್ದ ವೀರ
ಮನಸ್ಸು ಕದ್ದ ಚೋರ
ನಮ್ಮ ಪ್ರೀತಿ ಪುನೀತರಾಜಕುಮಾರ
ತೋರಲಿಲ್ಲ ಅಹಂಕಾರ
ಬೀಗಲ್ಲಿಲ್ಲಾ ಮಾಡಿ ಉಪಕಾರ
ಜೇವನವೇ ಪರೋಪಕಾರ
ತಂದೆ ಹಾದಿಯಲಿ ನಡೆದ ರಾಜಕುಮಾರ
ವಿಧಿಯ ಆಟದಿ ನಿಂತಿತು ಹೃದಯ ಸಂಚಾರ
🙏🏼💐💐💐ಕನ್ನಡದ ನಟ ಪುನೀತರಾಜಕುಮಾರ ಆತ್ಮಕೆ ಶಾಂತಿ ಸಿಗಲಿ💐💐💐🙏🏼
********ರಚನೆ *******,
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment