ಹುಣ್ಣಿಮೆ ಚಂದ್ರ
ನಾ ಕಂಡೆ ಹುಣ್ಣಿಮೆ ಚಂದ್ರ
ಸೌರಮಂಡಲದಿ ಕಾಣುವ ರಂದ್ರ
ಮೈಯ ತುಂಬ ಬೆಳಕು
ನೋಡಲು ಮನವೆಲ್ಲ ಕಲಕು
ತಂಪಾದ ಸಂಜೆ ತಣ್ಣನೆ ಗಾಳಿ
ಮಾರಾಗಿಡಗಳ ಮೈನವೀರೇಳಿ
ಎಲೆಗಳ ಶಬ್ದ ಕಾಡೆಲ್ಲಾ ನಿಶಬ್ದ
ಬೇಲಿಯ ಸಾಲು ಹಕ್ಕಿ ಅಮಲು
ನಡೆವಾಗ ನಾನು ಬಿದ್ದಂಗೆ ಬಾನು
ನೋಡಿದೆ ಕಣ್ಣೆತ್ತಿ ಚಂದ್ರನ
ನನ್ನಿಂದೆ ಬರುವ ಅವನ
ನಾ ನಿಂತಲ್ಲಿ ಅವ ನಿಂತ
ಕುಂತಾಲ್ಲಿಯೂ ನಿಂತ
ಹೊರಡಲು ಬರುವ ನೋಡುತಿಹಾ ಜಗವ
ನನ್ನಯ ಮನವ ಕಲಕಿದ ತನುವ
ನಾ ಮರೆಯೇ ಬೆಳದಿಂಗಳ ನಗುವ
ನೀನೇನೆ ಮುಸಕಾಗದ ಗೆಲುವ
ನಡು ರಾತ್ರಿಯಲಿ ನಾ ಕಾಡಲ್ಲಿ
ಗೂಬೆಯ ಕೂಗು ಕೇಳಿತು ನನಗಲ್ಲಿ
ಭಯ ಬಿದ್ದೆ ನಾನು ನೆನೆದೆನು ದೇವರನು
ಕೊಡು ನಿ ದೇವ ನನಗೆ ಧೈರ್ಯವ
ಹುಣ್ಣಿಮೆ ಬೆಳಕಲ್ಲಿ ಚಂದ್ರನ ನಗುವಲ್ಲಿ
ಮಿನುಗುತಿಹಾ ನಕ್ಷತ್ರ ಅಗಸದಲ್ಲಿ
ನೋಡುತ ನಿಂತೆ ಮರೆತು ಚಿಂತೆ
ತಾರೆಗಳ ಸಂಭ್ರಮ ಉಲ್ಕೆಗಳ ಅನುಪಮ
ದೇವಾ ನಿನ ಸೃಷ್ಟಿ ನಿ ಇಡಿದ ಮುಷ್ಟಿ
ಅದದ್ಬುತವೇ ನೋಡು ಬೆಳದಿಂಗಳ ಕಾಡು
ಹಕ್ಕಿಗಳ ಕಲರವ ಚುಕ್ಕಿಗಳ ಸಾವ
ಕಣ್ಮುಂದೆ ಬಂತು ನಿದ್ದೆಯ ತಂತು
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment