ವಿಧಿಯೂ ಕ್ರೂರ
ಪ್ರೀತಿ ನೀಡೋ ಮನಸಿಗೆ
ಸ್ಮಶಾನವೇಕೆ ಹಾಸಿಗೆ
ನೋವು ಪಡುವ ಹೃದಯಕೆ
ಚಳಿಗಾಲ ಕೂಡ ಬೇಸಗೆ
ಮನಸ್ಸು ಮುಗಿದು
ಹೃದಯ ಹರಿದು
ಒಲವ ತೇರದು
ನೀನೇಕೆ ಹೊರಟೆ ಯಾತ್ರೆಗೆ
ಕಾಲ ಒಂದೂ ವಿಧಿಯ ಗೊಂಬೆ
ನಾವಿದರ ಆಡು ಬೋಂಬೆ
ಹಸಿರು ಗಿಡದ ನಿಂಬೆ
ಬ್ರಹ್ಮ ನಿನ್ನ ಕೈಯಲ್ಲಿ
ಬರಹ ಏಕೆ ಬರೆದೆ ಆಣೆಯಲಿ
ಕಾಲವೊಂದು ಘೋರ
ವಿದಿಯು ಇನ್ನು ಕ್ರೂರ
ಮನಸ್ಸು ಏಕೋ ಬಾರ
ಸಾಗಿತೆಕೆ ಬದುಕು ಕಾಣದ ತೀರ
ನೂರು ಜನ್ಮ ಪಡೆದರೇನು
ಹಣವ ತುಂಬಾ ಮಾಡಿದರೇನು
ಜನದ ಪ್ರೀತಿ ಗಳಿಸಿದರೇನು
ಬ್ರಹ್ಮ ಬರೆದ ವಿದಿಯು ನಮ್ಮ ಬಿಟ್ಟಿತೆ
ಮೆಲುಕು ಹಾಕೋ ಕಾಲವನ್ನು ಸುಟ್ಟಿತೆ
ಈ ಜನ್ಮದಲಿ ಮತೊಮ್ಮೆ ಈ ಜೀವ ಹುಟ್ಟಿತೆ
*******ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment