ರಸ್ತೆ ಗುಂಡಿ
ಹಾಳು ಹಾದಿಯಲಿ ರಸ್ತೆ ಗುಂಡಿ
ಸಾಗುತಿದೆ ದಾರಿಯಲಿ ನಮ್ಮ ಜಟಕಾ ಬಂಡೀ
ನೋಡಲು ಅ ಮನೆಯ ಪಾಳು ಗುಡಿಯ
ಜಪಿಸಿ ಸಾಗಿದೆವು ನಮ್ಮ ವಿಧಿಯ
ಕುದುರೆಯು ಹೊತ್ತ ನಮ್ಮ ಬಂಡೀ
ನಡುಗುತಾ ಸಾಗಿತು ಮನವ ಇಂಡಿ
ಅಕ್ಕಪಕ್ಕದ ಗೊಟರು ಬಿದ್ದ ಗುಂಡಿ
ಗಾಲಿ ಉರುಳುತ ಅತ್ತೀತು ರಸ್ತೆ ಗುಂಡಿ
ನನ್ನ ನಲ್ಲೆಯು ನಗುತಾ ಹೇಳಿದಳು
ನಮ್ಮೋರ ದಾರಿ ಗುಂಡಿಗಳ ಸಾವರಿ
ಸೇರಲುನಾವು ತುಸು ದೂರ
ಹಾಗುವುದು ಮೇಲೆಲ್ಲಾ ನೋವ ಬಾರ
ಹಾಳು ಹಾದಿಯಲಿ ಸಾಗಿತು ನಮ್ಮ ಬಂಡೀ
ನಾನು ನನ್ನವಳು ತಿಂದೆವು ನಮ್ಮೋರ ತಿಂಡಿ
ಬದುಕಿನ ನೋಗದಲಿ ಹೊಸ ಯುಗದಲ್ಲಿ
ಗುಂಡಿ ಬಿದ್ದ ಹಾದಿಯಲಿ ಸಾಗಿತು ನಮ್ಮ ಜಟಕಾ ಬಂಡೀ
***********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment