ನಡೆವಾಗ ನೀನು



ನಡು ದಾರಿಯಲಿ ನಡೇವಾಗ ನೀನು

ಪ್ರೀತಿಯಲಿ ನುಡಿದೆನು ನಾನು

ಓ ನನ್ನ ಚಿನ್ನ ಪ್ರೀತಿಯಲಿ ರನ್ನ

ತಿರುಗಿ ನೋಡು ಒಮ್ಮೆ ನನ್ನ



ಒರೆಗಣ್ಣಲಿ ನೋಡಿ 

ಕಣ್ಣಸನ್ನೆಯ ಮಾಡಿ

ಮನಸಿನ ಕಾದ ತೀಡಿ

ನೀ ನಡೆದೇ ಮುಂದೆ

ಮತ್ತೆ ನೋಡದೆ ಇಂದೆ


ನಿನ ನೋಟ ಕಾಡಿತು

 ಒಲವೊಂದು ಮೂಡಿತು

ಪ್ರೀತಿಯನು ಬೇಡಿತು

ಹೃದಯದಿ ಹಾಡೊಂದು ಹಾಡಿತು


ಓ ನನ್ನ ಒಲವೇ ಪ್ರೀತಿಯು ಇತವೇ

ನಿನ ಮಾತು ಬಂಗಾರ ಚಂದ್ರನ ಅಲಂಕಾರ

ಕಣ್ಣಿನಾ ನೋಟವೇ ಮಿಂಚು

ನಗುವೊಂದು ಮೋಹಕ ಸಂಚು

ಪ್ರೀತಿಯ ಪಡೆಯುವ ವಂಚೂ 

ಕೆನ್ನೆಯು ಕೆಂಪು ಮನಸ್ಸಿಗೆ ತಂಪು 


ಕುಡಿ ನೋಟವೇ ಸೊಬಗು

ಸೀರೆಯು ಬಲು ಮೆರಗು

ನಿನ್ನ ಅಂದಂಕೆ ತಂದ ಬೆರಗು

ನಿ ಉಟ್ಟ ಸೀರೆಯ ಸೆರಗು


ನಡು ದಾರಿಯಲಿ ನಡೆವಗಾ ನೀನು

ಪ್ರೀತಿಯಲಿ ನುಡಿದೆನು ನಾನು

ಓ ನನ್ನ ಚಿನ್ನ ಪ್ರೀತಿಯಲಿ ರನ್ನ

ತಿರುಗಿ ನೋಡು ಒಮ್ಮೆ ನನ್ನ



*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35