ಮನಸ್ಸು
ಮನಸ್ಸು ಎಂಬುದು ಮುದ್ದಾದ ಕರ್ಮ
ದೇವರಿಗೆ ಗೋತ್ತು ಏನದರ ಮರ್ಮ
ಯಾರಿಗೂ ತಿಳಿಯದ ಸೊಬಗು
ಆರಿತವನೆ ಬಲ್ಲ ಅದರ ಮೆರಗು
ನಿಂತಲ್ಲಿ ನಿಲ್ಲುತಿಲ್ಲಾ ಕುಂತಲಿ ಕುರುತಿಲ್ಲಾ
ಸೆಕೆಂಡುಗಳಲಿ ಪ್ರಪಂಚ್ ಸುತ್ತಿ
ಮತ್ತೆ ಬಂದು ಬೂಪಾಟವ ಒತ್ತಿ
ತಿಳಿಯದೆ ಬಂದು ಸೇರುವುದು ನಮ್ಮ ನೆತ್ತಿ
ಅರಿಯಲೋರೇಟೇ ಅದರ ಮಾಯೆ
ಕಣ್ಣಿಗೆ ಕಾಣಲಿಲ್ಲ ಏಕೋ ಛಾಯೆ
ಇಡಿದರು ಸಿಕ್ಕುತ್ತಿಲ್ಲ ಹುಡುಕಿದರೂ ಸಿಗಲ್ಲಿಲ್ಲ
ಏಕೆ ಎಂದು ತಿಳಿಯಲ್ಲಿಲ್ಲ
ದೇವಾ ಸೃಷ್ಟಿಸಿದ ಮನಸ್ಸು ಬಿತ್ತುವುದು ಕನಸು
ದೈರ್ಯದಿಂದ ನುಗ್ಗಿದರೆ ಕನಸು ಕೂಡ ನನಸು
ಸೃಷ್ಟಿಸುವುದು ಮಾಯಲೋಕನಂಬಿದರೆ
ಸೇರಿಸುವುದು ಪರಲೋಕ ಎಚ್ಚರ ತಪ್ಪಿದರೆ
ಮನಸು ಎಂಬ ಮಾಯೆ ದೇವಾ ಕೊಟ್ಟ ಭಿಕ್ಷೆ
ಮನುಜ ನೀನು ಸರಿ ಉಪಯೋಗಿಸಿದರೆ ರಕ್ಷೆ
ಮೈ ಮರೆತರೆ ಖಂಡಿತ ನಿನಗೆ ಶಿಕ್ಷೆ
ಹಾರುವುದು ಕುಣಿಯುವುದು ಮರೆತು ಕಕ್ಷೆ
ಮನಸ್ಸು ಎಂಬುದು ಮುದ್ದಾದ ಕರ್ಮ
ದೇವರಿಗೆ ಗೋತ್ತು ಏನದರ ಮರ್ಮ
ಯಾರಿಗೂ ತಿಳಿಯದ ಸೊಬಗು
ಆರೋತವನೆ ಬಲ್ಲ ಅದರ ಮೆರಗು
**********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment