ಮರೆಯಾಗದ ಮಳೆ
ಮೋಡಗಳು ಚದುರಿ ಮಿಂಚೊನ್ದು ಮಿಂಚಿ
ಸಿಡಿಲೊಂದು ಸಿಡಿದು
ಸುರಿವ ಜಡಿ ಮಳೆಗೆ
ನಿರೊಂದು ನದಿಯಂತೆ ಹರಿಯುತ್ತಿತ್ತು.........
ತುಂಬಿದ ಈ ಮಳೆಗೆ
ಒಲದಲ್ಲಿನ ಬೇಳೆ
ಅಡಿಕೆಯ ಸಸಿಯು
ತೆಂಗಿನ ಗಿಡವು ಅಳುತಾಲ್ಲಿತ್ತು
ನಿಂತ ನಿರೊಂದು ಮುಂದೆ ಕದಲದೆ
ನಿಂತಲ್ಲೇ ನಿಂತು ಒಲವೆಲ್ಲಾ ಕೆಂಪಾಗಿ
ಕಾಣುತಿತ್ತು
ರೈತನ ಹೃದಯ ಒತ್ತಿ ಹುರಿಯುತಿತ್ತು
ಹಿಂಗಾರು ಮಳೆ ನೀರು
ಒಲದಲ್ಲಿ ಇಂಗಿ
ಬೆಳೆದ ಬೆಳೆಯು ಬಾಡಿ ಹೊಯ್ತು
ನೋವಿನ ಕಥೆಯ ಹೇಳಿ ಹೋಯ್ತು
ಬಾಡಿದ ಬೆಳೆಗೆ ಸರ್ಕಾರದಿಂದ
ಬೇಳೆ ಹಾನಿ ಹಣವು ಬಂತು
ರೈತನ ಕೈ ಸೇರೋ ಒಳಗೆ
ದಿಕ್ಕೇಟ್ಟ ರೈತನ ಹೆಣವೇ ಬಿತ್ತು
ಬಂದ ಹಣ ಅವನ ತಿಥಿಯ
ಬಾಡೂಟಕೆ ಸಾಲದಾಯ್ತು
ಯಾರಿಗೆ ಬೇಕು ಈ ರೈತನ ಕಸುಬು
ಮನೆ ಮಂದಿಯೆಲ್ಲಾ
ಸುಡುವ ನಸೀಬು
ಗೋಳಿಂದ ಊರು ಊರೇ ನಲುಗುತ್ತಿತ್ತು
ಮತ್ತೆ ಮುಂಗಾರು ಮಳೆಗೆ ಕಾಯುತಿತ್ತು
*********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment