ಬಣ್ಣದ ಚಿಟ್ಟೆ

ಬಣ್ಣದ ಚಿಟ್ಟೆ

ನನ ಮನದಲಿ ಏಕೋ ನೀನೇ ತುಂಬಿರುವೆ

ಕನಸಲಿ ಬಂದು ನನ್ನ ಕಾಡಿರುವೆ

ಎದೆಬಡಿತವೇ ನೀನು

ನನ ಮನಸಿನ ಮಿಡಿತವೇ ನೀನು

ನೀ ಸಿಗದೇ ಇನ್ನು ಪರೀತಪಿಸಿದೆ ನಾನು


ನೀ ಮುಗಿಯದ ಮೌನ

ನಾ ಬರೆದೇನು ಕವನ 

 ನಿನ ಸೇರುವ ಮುನ್ನ

ಈ ನಲಿವಿನ ಹಾಡು

ಒಮ್ಮೆ ನೀ ಕಲೆತು ನೋಡು 


ನೀ ಬಣ್ಣದ ಚಿಟ್ಟೆ

ನಾ ಮನಸ್ಸನು ಕೊಟ್ಟೆ 

ನನ್ನ ಬದುಕನು ಸುಟ್ಟೆ

ನೀ ಹೂವಿನ ದುಂಬಿ

ಮೋಸವೊದೆ ನಾ ನಿನ್ನ ನಂಬಿ


 ಈ ಜೀವನ ಪಯಣ

ಬರಿ ನೋವಿನ ದರ್ಪಣ

ನೀ ಮನದಲಿ ಬಂದೆ 

ನನ ಒಲವನು ಕೊಂದೆ


ಬಡಪಾಯಿ ಹೃದಯದಿ

ಎದೆ ಬಡಿತವೇ ಹಾಡು

ತಿರುಗಿ ಒಮ್ಮೆ ನನ್ನನು ನೋಡು

ಏಗಿದೆ ನನ್ನ ಈ ಒಂಟಿ ಪಾಡು


ಕನಸಿನ ಹಾದಿಯಲಿ

ನೀ ಒಲವನು ಕೊಟ್ಟೆ

ಬೇರೆತೊಗೊ ಮುನ್ನ

ನೀ ಮನಸ್ಸನ್ನು ಸುಟ್ಟೆ



ನೀ ಸುಂದರ ಕಡಲು

ನಾ ಅಲೆಗಳ ಮೇಲೆ ತೇಲುವ ದೋಣಿ

ಅ ಗಾಳಿಗೆ ಸಿಕ್ಕ ದೋಣಿಯೇ

ನೋಡು ಈ ನೀರಿನ ಅಮಲು


ನೀ ನನ್ನಯ ಕನಸು

ನೀ ಬಂದರೆ ಸೊಗಸು

ನೀ ಇರದೇ ಏಕೋ ನನ್ನಲಿ ಮುನಿಸು

ನಿನಗಾಗಿ ಈಗ ಸುಡುತಿದೆ ವಯಸು


ನೀ ಸುಂದರ ಮೀನು

ನಾ ಬಲೇ ಎಣೆಯುವೆ ನಾನು

ನೀ ಬಿದ್ದರೆ ನನಗೆ ಕಡಲಮುತ್ತೆ ನೀನು

ನೀ ಇರದೇ ಎಗೆ ಇರಲಿ ನಾನು


ನೀ ಬಣ್ಣದ ಚಿಟ್ಟೆ

ನಾ ಮನಸ್ಸನು ಕೊಟ್ಟೆ 

ನನ್ನ ಬದುಕನು ಸುಟ್ಟೆ

ನೀ ಹೂವಿನ ದುಂಬಿ

ಮೋಸವೊದೆ ನಾ ನಿನ್ನ ನಂಬಿ


*********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್


Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35