ಮೌನದ ಕವಿತೆ
ಮೌನದ ಕವಿತೆ |
ಮರೆತರೆ ಹೇಗೆ ಮೌನದ ಕವಿತೆ
ಪ್ರೀತಿಯ ಕೊಟ್ಟ ನಲ್ಮೆಯ ವನಿತೆ
ಸುಂದರ ನೋಡು ನಿನ್ನಯ ಚೆಲುವು
ನಗುತಿದೆ ಏಕೋ ನೋಡಿ ಒಲವು
ಕಣ್ಣಿನ ಕಾಡಿಗೆ ತೀಡಿದ ಚಂದ್ರ
ನಿನ್ನ ನೋಟಕೆ ಸೂರ್ಯನೇ ಬೆಂದ
ಮುಂಗುರುಳೇಕೋ ಮುದ್ದಾದ ಹಾರ
ಕೆನ್ನೆಯು ಹಾಗೆ ಡಿಂಪಲ್ ಸುಂದರ
ಆಸೆಯ ಹೊತ್ತು ಬಳಿ ನಾ ಬಂದೆ
ನೀನು ನನ್ನಲಿ ನೂರಾಸೆಯ ತಂದೆ
ಮೌನದಿ ನೀನು ನುಡಿವೆಯ
ರಾಗಕೆ ಮಿಡಿದ ಶ್ರುತಿಯು ಸವಿಮಯ
ಒಲವಲಿ ಏಕೋ ಮಿಡಿದಿದೆ ಹೃದಯ
ಜೀವನ ತಂದ ಜೇನಿನ ಸವಿಯ
ಸುಂದರವಾಲ್ಲವೇ ಈ ಸವಿಗನಸು
ಪ್ರೀತಿಯ ಬಾರಕೆ ಮಿಡಿದಿದೆ ಮನಸು
ನಿನ್ನಯ ಸಲುಗೆ ಸುಂದರ ಕನಸು
ಧನಿಡಿದೆ ಏಕೋ ಈ ವಯಸು
ಒಲವು ಒಂದೂ ಬಿಂಬದ ಮಾಯೆ
ಮರೆತರು ಹೋಗದ ನಿನ್ನಯ ಛಾಯೆ
ಮರೆತರೆ ಹೇಗೆ ಮೌನದ ಕವಿತೆ
ಪ್ರೀತಿಯ ಕೊಟ್ಟ ನಲ್ಮೆಯ ವನಿತೆ
ಸುಂದರ ನೋಡು ನಿನ್ನಯ ಚೆಲುವು
ನಗುತಿದೆ ಏಕೋ ನೋಡಿ ಒಲವು
**********ರಚನೆ ******
ಡಾ ಚಂದ್ರಶೇಖರ. ಸಿ. ಹೆಚ್
Comments
Post a Comment