ನೆನಪು
ಕಣ್ಣ ಹನಿಯು ಒಲವ ಕಂಬನಿ
ಎಲೆಯ ಮೇಲೆ ಬಿದ್ದ ಇಬ್ಬನಿ
ಸುರಿವ ಮಳೆಗೆ ತೊಯುದು
ಹರಿವ ನದಿಗೆ ಜಾರಿ ಹೋಯ್ತು
ಒಲವ ನೆನಪೊಂದು ಬಿಡದೆ ಕಾಡಿದೆ
ನಿನ್ನ ಪ್ರೀತಿಯ ಸಲುಗೆ ಬೇಡಿದೆ
ಮನ ಬಿಚ್ಚಿ ಹೇಳು ಒಮ್ಮೆ ಕೇಳುವೆj
ನಿನ್ನನೇ ನಾನು ಪ್ರೀತಿ ಮಾಡುವೆ
ವಿಧಿಯ ಆಟವು ಏಕೋ ಒಡಿದೆ
ಕನಸು ಕಾಣುವ ಮುನ್ನ ಮನವು ನೊಂದಿದೆ
ನೂರಾಸೆಯನು ನುಚ್ಚು ಮಾಡಿದೆ
ನಿ ಇರದೇ ಹೃದಯ ಬೇಡಿದೆ
ನನ್ನ ಒಲವ ಪ್ರೀತಿ ನಲ್ಲೆಯೇ
ಮನಸ್ಸಿನ ಅಸೆ ನೀನು ಬಲ್ಲೆಯೇ
ನುಡಿವೆ ನಾನು ಒಲವ ನಿಜವಾ
ಒಮ್ಮೆ ಕೇಳು ಮನದ ಮಜವ
ಒಲವು ಎಂಬುದು ಬಲು ಮೋಹಕ
ಮನಸ್ಸು ಎಂಬುದು ಒಲವ ಗ್ರಾಹಕ
ಪ್ರೇಮಿಗಳೆ ನಗುವ ಒಲವ ಪೋಶಕ
*******†***ರಚನೆ ********
ಡಾ. ಚಂದ್ರಶೇಖರ ಸಿ. ಹೆಚ್
Comments
Post a Comment