ಕಾಗದದ ದೋಣಿ
ನಾವಿಕನಿಲ್ಲದ ಕಾಗದದ ದೋಣಿಯೇ
ಎಲ್ಲಿಗೆ ನಿನ್ನ ಪಯಣ
ನೀರಿನ ಅಲೆಗಳ ಹೊಡೆತಕೆ
ಆಲೂಗಾಡಿದೆ ನಿನ್ನ ಜೀವನ
ಗಾಳಿಯು ಬಿಸಿದೆ ನಿನ್ನನ್ನು ನೂಕಿದೆ
ಸೇರುವೆಯಾ ನಿ ತೀರವ
ಒಲವಿಂದ ನಾ ಬಿಟ್ಟ ಕಾಗದದ ದೋಣಿಯೇ
ಒರುವೆಯಾ ಪ್ರೀತಿ ಬಾರವ
ಮುಂದೆ ಮುಂದೆ ಸಾಗಿ ನೀರಲ್ಲಿ ಮುಳುಗಿ ನೀನೇಕೆ ಸೋತೆ
ಮನದ ಆಸೆಯ ಅರಿಯದೆ ನನ್ನನ್ನು ನಾ ಮರೆತೇ
ನಿನ್ನಲಿ ನಲಿವನ್ನು ಕಾಣದೆ
ಕನಸ್ಸಲ್ಲಿ ನಾ ಬೇರೆತೆ
ತಣ್ಣನೆ ನೀರಿಗೆ ನಲುಗಿದೆ ನಿನ್ನ ಮೈ
ಕೊಟ್ಟೋದೇ ನಿ ನನಗೆ ಕೈ
ದಡ ಸೇರುವ ನನ್ನಯ ಕನಸಿಗೆ
ನಿ ಬಿದ್ದೆ ಪ್ರೀತಿಯ ನೀರಿನ ಸುಳಿಗೆ
ಬಣ್ಣದ ಜಾತ್ರೆಯ ಕಾಗದದ ದೋಣಿಯೇ
ನನ್ನಾಸೆ ಒಲವಿನ ಪ್ರೀತಿಯ ಏಣಿಯೇ
ತಿಳಿಸದೇ ನಿ ಹೊರಟೆ ಮುಳುಗಿ
ನನ ಮನವು ನಿನ ನೋಡಿ ಕರಗಿ
ಅ ಊರ ದಡ ದೂರ ನಿ ಸೇರಿದೆ ನೋವಿನ ತೀರ
ನಿ ಇಲ್ಲದ ನನಗೆ ಮನಸೇಕೋ ಬಲು ಬಾರ
ಮತ್ತೊಮ್ಮೆ ಬಿಡುವೆನ್ನು ದೋಣಿಯೇ ನಿನ್ನ
ಸೇರು ನಿ ದಡವ ಸಾಯುವ ಮುನ್ನ
ನಾವಿಕನಿಲ್ಲದ ಕಾಗದದ ದೋಣಿಯೇ
ಎಲ್ಲಿಗೆ ನಿನ್ನ ಪಯಣ
ನೀರಿನ ಅಲೆಗಳ ಹೊಡೆತಕೆ
ಆಲೂಗಾಡಿದೆ ನಿನ್ನ ಜೀವನ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment