ಮೂರಬಟ್ಟೆ



ಬದುಕುಎಂಬುದು ಮೂರಬಟ್ಟೆ

ನಿ ನನಗೆ ಪ್ರೀತಿಯಲಿ ಕೈ ಕೊಟ್ಟೆ 

ನಿನ್ನ ನೆನಪಲಿ ನಾ ಕೆಟ್ಟೆ 

ದೇವರೇ ಇಂಥ ವರವನ್ನು ನೀನೇಕೆ ಕೊಟ್ಟೆ


ಒಟ್ಟೆಗೆ ಊಟವಿಲ್ಲ ಈಟ್ಟಿಗೆ ಕಾಸಿಲ್ಲ

ಮನಸ್ಸು ಎಂಬುದು ಮಸಣವೇ ಎಲ್ಲಾ

ನೂರೆಂಟು ನೋವು ಮನತುಂಬಿದೆಯೇಲ್ಲಾ

ಕಾಣದ ದೇವರಿಗೆ ಕೈ ಮುಗಿದೆನಲ್ಲ 


ಕಂಡ ಕನಸು ಒಂದು ನನಸ್ಸಗಲಿಲ್ಲ

ಪ್ರೀತಿ ಮಾಡಿದ ನೆನಪು ಕಾಡಿದೆಯೇಲ್ಲಾ

ಮೋಸ ಹೋಗಿ ನಾ ಹುಚ್ಚನಾದೆನಲ್ಲ

ನಿನ್ನ ನೆನೆದು ಬದುಕು ಹಾಳಾಯ್ತಲ್ಲ


ಯಾರ ಶಾಪವೋ ವಿಧಿ ಆಟವೋ

ದೇವರ ನನಗೆ ನೀಡಿದ ಪಾಪವೋ

ನಡೆದು ನಡೆದು ದಣಿದೇನು ನಾನು

ಹುಡುಕಿದರೂ ಸಿಗಲಿಲ್ಲ ನೀನು


ನೋಡಿದರೆ ನೂಕುವರು ನನ್ನ

ಬೇಡಿದರೆ ಇಡಲಿಲ್ಲ ಕೊಂಚ ಅನ್ನ

ಕೇಳಿದರೆ ನೀಡರು ನೀರು

ವಿಧಿ ಆಟ ನೋಡು ಎಷ್ಟು ಕ್ರೂರ



ಮನಕಲಕದೆ ನನ್ನ ನೋಡಿ

ನೋವಾತಾಳಲರಾದೆ ನಾ ಓಡಿ

ಸಮಾಜವೇ ನನ್ನ ಜೀವನದ ಕೇಡಿ

ಯಾರಿಗೆ ಏಳಲಿ ನನ್ನ ಬದುಕಿನ ರಾಡಿ


********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35