ಮಸಣದ ಹೂವು
ಮಸಣದಲ್ಲಿ ಅರಳಿದ ಹೂವೆ
ದಿನ ನೋಡುವುದು ಬರಿ ನೋವೇ
ಹಾಸಿ ಹೋದ್ದಿರುವ ಹೂವಿನ ರಾಶಿ
ಬಾಡಿ ಹೋಗುವುದು ಶಿವನೇ ಕಾಶಿ
ಆರು ಮೂರಡಿಯ ಗುಂಡಿಯಲ್ಲಿ
ಬರಿದಾಗುವ ಮೂಳೆ ಮಾಂಸಗಳು
ಬಿಲ್ವಾ ಪತ್ರೆ ವಿಭೂತಿಯಲಿ
ಪೂಜೆಗೈವರು ಹೋರಟನೆಂದು
ಕಣ್ಣೀರು ಸುರಿಸವರು ಕಾಣನೆಂದು
ವಿಧಿಯ ಕೈ ಗೊಂಬೆ ಮನುಜ
ಹೊತ್ತು ಹೋಗಲ್ಲಿಲ್ಲ ಕಣಜ
ಬಿಟ್ಟೋಗೋ ಬಾಳಿಗೆ ತುಂಬಿಟ್ಟೆ ಜೋಳಿಗೆ
ಸೇರುವರು ಜನ ನಿನಗೆ ಕಳಿಸಲು ಪಾಪ ಪುಣ್ಯದ ಹಾದಿಗೆ
ಹುಟ್ಟುವಾಗ ಅಮ್ಮ ಅತ್ತಳು
ಸಾಯುವಾಗ ಸಂಸಾರ ಅತ್ತಿತ್ತು
ಮದ್ಯೆ ನಿ ಮಾಡಿದ ಹೆಸರು
ಕಾದಿದೆ ಇರುವಾಗ ನಿನ್ನ ಉಸಿರು
ಮಸಣದಲಿ ಅರಳಿದೆ ಹೂವೆ
ನಿನ ಮೇಲೆ ಎಸೆದ ಸೀರೆ
ಸಿಂಗರಿಸಿದಂತಿದೆ ಸೌಂದರ್ಯದ ನೀರೇ
ಬಾಡುವ ಮುನ್ನ ಒಮ್ಮೆ ಮೊಗವ ತೊರೆ
ಕಟ್ಟೀಹ ಆ ಘೋರಿ ಹೇಳಿದೆ ನಿನ್ನ ಹೆಸರು ಸಾರಿ
ಬದುಕು ಮೂರೇ ದಿವಸ
ಬಾಳು ನಿ ಸರಿ ದಾರೀಲಿ ಮನುಸ
ನಿನ್ನ ಹೆಸರು ಹೇಳಲಿ ನಿನ್ನ ಉಪಕಾರದ ಕೆಲಸ
**********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment