ರಾವಣ
ಗುರಿ ಇಟ್ಟ ಬಾಣ ಗುರಿ ತಪ್ಪಿ
ನನ್ನಯೆದೆಯಾ ಸೀಳಿರಲು
ಆಂಬೊಂದು ಸುಡುಗಾಡಿನಲಿ ಸಿಡಿಯುತಿತ್ತು
ರಾವಣನ ಅಟ್ಟಹಾಸ ಮೆರೆಯುತ್ತಿತ್ತು
ಯಾರು ಇಟ್ಟರು ಶಾಪ
ನೋವಿನ ತಾಪ ಸುಡುತಿತ್ತು
ಸೀತೆಯ ಮೊಗವ ನೋಡಿ
ರಾವಣನ ಕನಸ್ಸು ಚಿಗುರುತಿತ್ತು
ಎಲವೋ ಸೀತೆ ರಾಮನು ಸತ್ತ
ನಿನ್ನ ಮನದ ಆಸೆಯ ಕಿತ್ತ
ಒಲವನೆ ಸುಟ್ಟ ರಾವಣನೂ
ನಾನೆಂದು ಮನಸ್ಸು ಕುಣಿಯುತಿತ್ತು
ಈಗ ಸೀತೆಯ ದುಖ್ಖ ಇರದೇ ರಾಮಾನು ಪಕ್ಕ
ಮನಸ್ಸು ಹೊತ್ತಿ ಹುರಿಯುತಿತ್ತು
ನನ್ನ ರಾಮನ ಕೊಂದ ಪ್ರೀತಿಯ ತಿಂದ
ಬಿಡೆನು ನಾನು ಏನುತಿತ್ತು
ವಿಜಯದಶಮಿಯೊಂದು ದುರ್ಗೆಯ ಬೇಡಿ
ವರವನ್ನು ಕಾಡಿ ಪ್ರೀತಿಯ ರಾಮನ ಸುಟ್ಟ
ರಾವಣನ ಸಮ್ಮಾರ ನಡೆಯಲಿತ್ತು
ಎಳು ತಲೆ ರಾವಣನ ಸುಡುಲು ಬಿಟ್ಟ
ಬಾಣ ತಲೆಯನ್ನೇ ಎತ್ತಿ ಎಸೆಯುತ್ತಿತ್ತು
ರಾವಣನ ತಲೆ ಹೋಗಿ ನೆಲಕ್ಕೆ ಬಿದ್ದು
ಸೀತೆಯ ನೋಡಿ ನಗುತಾಲಿತ್ತು
ಒ ನನ್ನ ಸೀತೆ ರಾಮನ ಪತಿವ್ರತೆ
ಮತ್ತೆ ಹುಟ್ಟಿಬರುವೆ
ನಿನ್ನ ನಾ ಬಿಡೆನು ಏನುತಲಿತ್ತು
ರಾಮ ಇರದ ನೋವು ಸೀತೆಯನು
ಬಳಿ ಬಂದು ಕಾಡುತಿತ್ತು..
**********ರಚನೆ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment