ಕಾವಲು ನಾನಾದೆ
ಕಾವಲು ನಾನಾದೆ |
ಕನಸಿನ ಊರಿಗೆ ಕಾವಲು ನಾನಾದೆ
ಹೃದಯದ ಬೀದಿಗೆ ತೇರು ನಿನಾದೆ
ಒಲವಿನ ಜಾತ್ರೆಗೆ ನಾನು ಬೇರಗಾದೆ
ನಿನ್ನಯ ನಗುವಿಗೆ ಸೋತು ಮರುಳಾದೆ
ಮನಸಿನ ಆಸೆಗೆ ಕನ್ನಡಿಯೇ ಮುನ್ನುಡಿಯು
ಬಳಿ ಬಂದ ನೋವಿಗೆ ಈ ಬೆಸುಗೆಯೂ
ತೀರದ ಬಯಕೆಗೆ ಕನಸೊಂದೆ ದಾರಿ
ನನ್ನಾಸೆ ಹೂವು ಕಮರಿದೆ ಪ್ರತಿ ಬಾರಿ
ಕಾಣದ ಹಾದಿಗೆ ಈ ಕವಲು ದಾರಿ
ನಡೆವಾಗ ನಡುಗಿದೆ ಪೀತಿಯು ಸೋರಿ
ಸೇರಲು ನಾವು ದೂರದ ತೀರ
ಮನಸಿನ ಕಥೆಯೊಂದು ಬಾರ
ನಸುನಗುವ ನೀನೇಕೆ ಬಳಿ ಬಂದೆ
ನನ್ನಲಿ ಒಲವನ್ನು ಹೊತ್ತು ತಂದೆ
ಒಲವಲ್ಲಿ ಇತವಿಲ್ಲ ಮನಸ್ಸಲಿ ಸೊಬಗಿಲ್ಲ
ನೂರೆಂಟು ಕನಸು ಕಣ್ಣಲಿ ಕರಗಿತ್ತಲ್ಲ
ಚೂರಾದ ಮಾತು ಮರೆತೋಯುತು ಸೋತು
ಕಣ್ಣಿಗೆ ಕಾಣದ ನೆನಪಾಯ್ತು ಮುತ್ತು
ನೇಪಾವೊಂದೇ ದಾರಿ ಬೀಳುವ ಕನಸಿಗೆ
ಒಮ್ಮೆ ನೀನು ಹೇಳು ಒಲವ ಮನಸಿಗೆ
ಕನಸಿನ ಊರಿಗೆ ಕಾವಲು ನಾನಾದೆ
ಹೃದಯದ ಬೀದಿಗೆ ತೇರು ನಿನಾದೆ
ಒಲವಿನ ಜಾತ್ರೆಗೆ ನಾನು ಬೇರಗಾದೆ
ನಿನ್ನಯ ನಗುವಿಗೆ ಸೋತು ಮರುಳಾದೆ
*********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment